10 ತಿಂಗಳ ಮಗುವಿನ ಗಂಟಲಲ್ಲಿ ಸಿಲುಕಿಕೊಂಡಿದ್ದ ಎಲ್‌ಇಡಿ ಬಲ್ಬ್ 
ಕೊಡಗು

ಮಗು ಗಂಟಲಲ್ಲಿದ್ದ ಎಲ್‌ಇಡಿ ಬಲ್ಬ್ ಹೊರತೆಗೆದ ವೈದ್ಯರು

ಸುನಿಲ್ ಪೊನ್ನೇಟಿ
ಮಡಿಕೇರಿ:
ಹತ್ತು ತಿಂಗಳ ಮಗುವೊಂದರ ಗಂಟಲಲ್ಲಿ ಸಿಲುಕಿಕೊಂಡಿದ್ದ ಎಲ್‌ಇಡಿ ಬಲ್ಬ್ ಯಶಸ್ವಿಯಾಗಿ ತೆಗೆಯುವಲ್ಲಿ ಇಲ್ಲಿಯ ಇಬ್ಬರು ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ. ಆಟವಾಡುತ್ತಿದ್ದ ವೇಳೆ ಎಲ್‌ಇಡಿ ಬಲ್ಬ್ ಅನ್ನು ಮಗು ನುಂಗಿಬಿಟ್ಟಿತ್ತು. ಶ್ವಾಸಕೋಶಕ್ಕೆ ಹೋಗುವ ನಾಳದಲ್ಲಿ ಈ ಬಲ್ಬ್ ಸಿಕ್ಕಿಹಾಕಿಕೊಂಡಿತ್ತು. ಅದು ಸ್ವಲ್ಪ ಕೆಳಕ್ಕೆ ಹೋಗಿದ್ದರೆ ಅದರಿಂದ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು.
ಮನೆಯಲ್ಲಿ ಮಗು ಒಮ್ಮೆಲೇ ಅಳಲು ಆರಂಭಿಸಿದ್ದರಿAದ ಗಾಬರಿಯಾದ ಪಾಲಕರು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಎಕ್ಸ್ರೇ ಮಾಡಿದಾಗ ಗಂಟಲಲ್ಲಿ ಚಿಕ್ಕ ಲೋಹದ ವಸ್ತು ಸಿಲುಕಿರುವುದು ಕಂಡುಬAದಿದೆ. ಪಿನ್ ನುಂಗಿರಬಹುದು ಎಂದು ವೈದ್ಯರು ಮೊದಲು ಶಂಕಿಸಿದ್ದರು. ಲ್ಯಾರಿಂಗೋಸ್ಕೋಪ್ ಪರೀಕ್ಷೆ ನಡೆಸಿದ ಸಂದರ್ಭ ಗಂಟಲಲ್ಲಿ ಎಲ್‌ಇಡಿ ಬಲ್ಬ್ ಸಿಲುಕಿರುವುದು ಕಂಡುಬAದಿದೆ.
ಕೂಡಲೇ ಚಿಕಿತ್ಸೆ ಆರಂಭಿಸಿದ ಇಎನ್‌ಟಿ ಸರ್ಜನ್ ಡಾ. ರಾಜಶ್ರೀ, ಮಕ್ಕಳ ತಜ್ಞ ಡಾ. ಕುಶ್ವಂತ್ ಕೋಳಿಬೈಲು ಮತ್ತು ತಂಡ ಚಾಕಚಕ್ಯತೆಯಿಂದ ಈ ಬಲ್ಬ್ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಕಾಲದಲ್ಲಿ ಮಗುವನ್ನು ಪಾಲಕರು ಆಸ್ಪತ್ರೆಗೆ ಕರೆತಂದಿದ್ದರಿAದ ಸಂಭಾವ್ಯ ಅಪಾಯ ತಪ್ಪಿದೆ. ಸದ್ಯ ಮಗು ಸುರಕ್ಷಿತವಾಗಿದ್ದು ಚೇತರಿಸಿಕೊಳ್ಳುತ್ತಿದೆ. ಹರಿತವಾದ ವಸ್ತುಗಳು, ಆಕರ್ಷಕ ಚಿಕ್ಕ ಪುಟ್ಟ ಅಪಾಯಕಾರಿ ವಸ್ತುಗಳನ್ನು ಪುಟ್ಟ ಮಕ್ಕಳಿಂದ ದೂರ ಇಡಬೇಕು. ಮಕ್ಕಳಿಗೆ ತಿಳುವಳಿಕೆ ಮೂಡುವ ತನಕ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಪುಟ್ಟ ಮಕ್ಕಳ ಪಾಲಕರಿಗೆ ಸಲಹೆ ನೀಡಿದ್ದಾರೆ.