ಸ್ಟಾರ್ಟಪ್ ಕರ್ನಾಟಕ ಯೋಜನೆಯ ಲಾಂಛನ
ಗುಡ್ಡಗಳ ಸಾಲು, ಕಾಫಿ ತೋಟಗಳ ಕಂಪನ್ನು ಸೂಸುವ ಕೊಡಗು ಜಿಲ್ಲೆ ಎಂದರೆ ತಕ್ಷಣ ನೆನಪಾಗುವುದು ಪ್ರಕೃತಿ ಸೌಂದರ್ಯ, ಯೋಧರು ಮತ್ತು ಕ್ರೀಡಾಪಟುಗಳು. ಆದರೆ, ಕಳೆದ ಕೆಲವು ವರ್ಷಗಳಿಂದ ಮಲೆನಾಡಿನ ಈ ಸುಂದರ ಜಿಲ್ಲೆಯಲ್ಲಿ ಹೊಸದೊಂದು ಮೌನ ಕ್ರಾಂತಿ ನಡೆಯುತ್ತಿದೆ. ನಾವಿನ್ಯತೆಯ ಚಿಂತನೆಗಳೊAದಿಗೆ ಉದ್ಯಮಗಳನ್ನು ಶುರು ಮಾಡಲು ಈಗಿನ ತಲೆಮಾರು ಮುಂದಾಗುತ್ತಿದ್ದು, ಕಳೆದ 5 ವರ್ಷಗಳಲ್ಲಿ 11 ನವೋದ್ಯಮಗಳು ಆಂಭವಾಗಿವೆ. ರಾಜ್ಯದಲ್ಲಿ ಆರಂಭವಾಗಿರುವ 2,584 ಸ್ಟಾರ್ಟಪ್‌ಗಳಿಗೆ ಹೋಲಿಸಿದರೆ ಜಿಲ್ಲೆಯ ಸಂಖ್ಯೆ ಕಡಿಮೆ ಅನ್ನಿಸಿದರೂ ಜೆನ್‌ಜಿಗಳಲ್ಲಿ ಉದ್ಯಮದ ಬಗ್ಗೆ ಆಸಕ್ತಿ ಬೆಳೆಯುತ್ತಿರುವುದು ದೊಡ್ಡ ಮಟ್ಟದ ನಿರೀಕ್ಷೆಗೆ ಕಾರಣವಾಗಿದೆ.
ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಅಧಿಕೃತ ವರದಿಯ ಪ್ರಕಾರ, ರಾಜ್ಯದಾದ್ಯಂತ ನವೋದ್ಯಮ ವಲಯ ವೇಗವಾಗಿ ವಿಸ್ತರಣೆ ಆಗುತ್ತಿದೆ. ಇದಕ್ಕೆ ತಕ್ಕಂತೆ ಕೊಡಗಿನ ಉದ್ಯಮಶೀಲ ಯುವಜನತೆಯೂ ಜಾಗತಿಕ ವೇದಿಕೆಯಲ್ಲಿ ತಮ್ಮ ಗುರುತು ಮೂಡಿಸಲು ಸಜ್ಜಾಗುತ್ತಿದ್ದಾರೆ. ಒಳ್ಳೆಯ ಓದಿಗೆ ಉನ್ನತ ಹುದ್ದೆ, ಕೈ ತುಂಬಾ ಸಂಬಳ ಸಿಗುತ್ತಿದ್ದರೂ ಮತ್ತೊಬ್ಬರ ಕೈ ಕೆಳಗೆ ಕೆಲಸ ಮಾಡಬೇಕೆನ್ನುವ ಕಸಿವಿಸಿ ಕೆಲವು ಪ್ರತಿಭಾವಂತರನ್ನು ಕಾಡುತ್ತಿರುತ್ತದೆ. ಇಂಥವರು ಸ್ವಂತದ್ದೊAದು ಉದ್ಯಮ ನಡೆಸುತ್ತಾ ತಾನೇ ಬಾಸ್ ಆಗಿರಬೇಕು, ತನಗೆ ಯಾರ ಅಂಕುಶವೂ ಇರಬಾರದು ಎನ್ನುವ ಕನಸು ಕಾಣುತ್ತಿರುತ್ತಾರೆ. ಹಾಗಾಗಿಯೇ ಈಗಿನ ಯುವ ತಲೆಮಾರು ಸ್ವಂತ ಉದ್ದಿಮೆಗಳತ್ತ ಆಸಕ್ತಿ ತೋರಿಸುತ್ತಿದ್ದು, ಸ್ಟಾರ್ಟಪ್‌ಗಳ ಸ್ಥಾಪನೆಗೆ ಮನಸ್ಸು ಮಾಡುತ್ತಿದ್ದಾರೆ.
ಸ್ಟಾರ್ಟಪ್‌ಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಅನುಕೂಲಗಳನ್ನು ಮಾಡಿ ಕೊಡುತ್ತಿದ್ದರೂ ಕೊಡಗಿನಲ್ಲಿ ನವೋದ್ಯಮಗಳ ಸ್ಥಾಪನೆಗೆ ಅಷ್ಟಾಗಿ ಆಸಕ್ತಿ ಕಂಡುಬರುತ್ತಿರಲಿಲ್ಲ. 2023ರ ತನಕ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಕೇವಲ 3 ಸ್ಟಾರ್ಟಪ್‌ಗಳು ಜಿಲ್ಲೆಯಲ್ಲಿ ಹುಟ್ಟಿಕೊಂಡಿದ್ದವು. ಮೂಲತಃ ಕೃಷಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಮೊದಲಿನಿಂದಲೂ ಕೈಗಾರಿಕೆಗಳ ಸಂಖ್ಯೆ ಕಡಿಮೆ ಇದೆ. ಜಿಲ್ಲೆಯ ಏಕೈಕ ಕೈಗಾರಿಕಾ ಪ್ರದೇಶ ಕುಶಾಲನಗರ ತಾಲೂಕು ಕೂಡ್ಲೂರುವಿನಲ್ಲಿದ್ದು, ಇಲ್ಲಿ ಬಹುತೇಕ ಕಾಫಿ ಮತ್ತು ಕಾಫಿ ಉಪ ಉತ್ಪನ್ನಗಳಿಗೆ ಸಂಬAಧಿಸಿದ ಕೈಗಾರಿಕೆಗಳು ಕಾರ್ಯಾಚರಿಸುತ್ತಿವೆ. ಇದರಿಂದಾಗಿ ಕೈಗಾರಿಕೆಗಳಲ್ಲಿ ಉದ್ಯೋಗವಕಾಶ ಸೀಮಿತವಾಗಿದ್ದು, ಉದ್ಯೋಗ ಅರಸಿ ಜಿಲ್ಲೆಯಿಂದ ಹೊರಹೋಗುವವರ ಸಂಖ್ಯೆ ಹೆಚ್ಚು ಇದೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರವೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶದ ಬಾಗಿಲು ತೆರೆದಿದೆ.
ಕೇಂದ್ರ ಸರ್ಕಾರದ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆ ಅಡಿಯಲ್ಲಿ ಕೊಡಗಿನಲ್ಲಿ ಕಾಫಿಯನ್ನು ಆಯ್ಕೆ ಮಾಡಲಾಗಿದೆ. ಇಲ್ಲಿಯೂ ಸಾಕಷ್ಟು ಅವಕಾಶಗಳಿದ್ದರೂ ಕೊಡಗಿನವರು ಇದನ್ನು ಬಳಸಿಕೊಳ್ಳುವ ಮನಸ್ಸು ಮಾಡುತ್ತಿರಲ್ಲ. ಇದಕ್ಕೆ ಮಾಹಿತಿಯ ಕೊರತೆಯೇ ಕಾರಣ ಆಗಿರಬಹುದು ಎಂದು ಹೇಳಲಾಗುತ್ತಿದೆ. ಹಾಗಾಗಿ ಸ್ಟಾರ್ಟಪ್‌ಗಳಿಗಾಗಿ ಸರ್ಕಾರದ ಯೋಜನೆಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಅರಿವು ಮೂಡಿಸುತ್ತಿರುವುದರಿಂದ ನವೋದ್ಯಮಗಳನ್ನು ಆರಂಭಿಸಲು ಈಗಿನ ತಲೆಮಾರು ಆಸಕ್ತಿ ತೋರಿಸಲಾರಂಭಿಸಿದೆ.
2021-22ರಿಂದ 2025-26ರ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು 11 ನವೋದ್ಯಮಗಳು ನೋಂದಾಯಿಸಲ್ಪಟ್ಟಿವೆ. ವರ್ಷಾವಾರು ನವೋದ್ಯಮಗಳ ಬೆಳವಣಿಗೆ ನಿಧಾನವಾಗಿ ಆರಂಭಗೊAಡರೂ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವೇಗ ಪಡೆದುಕೊಂಡಿದೆ. 2021-22ನೇ ಸಾಲಿನಲ್ಲಿ 1, 2022-23ನೇ ಸಾಲಿನಲ್ಲಿ 2, 2023-24ನೇ ಸಾಲಿನಲ್ಲಿ 1, 2024-25ನೇ ಸಾಲಿನಲ್ಲಿ 2 ಹಾಗೂ 2025-26ನೇ ಸಾಲಿನಲ್ಲಿ 5 ನವೋದ್ಯಮಗಳು ಜಿಲ್ಲೆಯಲ್ಲಿ ನೋಂದಣಿ ಆಗಿವೆ.
ಆರಂಭಿಕ ವರ್ಷಗಳಲ್ಲಿ ವರ್ಷಕ್ಕೆ ಒಂದು ಅಥವಾ ಎರಡು ಸ್ಟಾರ್ಟ್ಅಪ್‌ಗಳು ಮಾತ್ರ ನೋಂದಣಿಯಾಗುತ್ತಿದ್ದವು. ಆದರೆ 2025-26ರ ಪ್ರಸಕ್ತ ಸಾಲಿನಲ್ಲಿ ಒಂದೇ ವರ್ಷದಲ್ಲಿ 5 ಹೊಸ ನವೋದ್ಯಮಗಳು ಸ್ಥಾಪನೆಯಾಗಿರುವುದು ಜಿಲ್ಲೆಯ ಉದ್ಯಮಶೀಲ ವಲಯದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಸ್ಥಳೀಯ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಲು ಜಿಲ್ಲೆಯ ಯುವಜನತೆ ಮುಂದೆ ಬರುತ್ತಿದ್ದಾರೆ ಎಂಬುದಕ್ಕೆ ಈ ಅಂಕಿ-ಅAಶಗಳೇ ಸಾಕ್ಷಿಯಾಗಿದೆ.
ಕೊಡಗಿನ ನೈಸರ್ಗಿಕ ಸಂಪನ್ಮೂಲಗಳು, ಕೃಷಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮವನ್ನು ಆಧಾರವಾಗಿಟ್ಟುಕೊಂಡು ಇತ್ತೀಚಿನ ವರ್ಷಗಳಲ್ಲಿ ನವೋದ್ಯಮಗಳನ್ನು ಆರಂಭಿಸುವ ಮತ್ತು ಈ ಬಗ್ಗೆ ವಿಭಿನ್ನವಾಗಿ ಚಿಂತಿಸುವ ಯುವಕರ ಸಂಖ್ಯೆ ಹೆಚ್ಚಾಗಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಜೈವಿಕ ರಸಗೊಬ್ಬರ ಹಾಗೂ ಸಸ್ಯ ಸಂರಕ್ಷಣೆಗೆ ಬೇಕಾಗುವ ಬಯೋ ಕ್ಯಾಪ್ಸುಲ್‌ಗಳನ್ನು ತಯಾರಿಸುವ ಮೂಲಕ ಜಿಲ್ಲೆಯ ಸ್ಟಾರ್ಟಪ್ ಒಂದು ಹೆಸರು ಮಾಡಿದೆ. ಕೊಡಗಿನ ಸ್ಥಳೀಯ ಬೆಳೆಗಳಾದ ಕಾಫಿ, ಏಲಕ್ಕಿ ಮತ್ತು ಕರಿಮೆಣಸನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಕೆಲವೊಂದು ಬ್ರ‍್ಯಾಂಡ್‌ಗಳು ಪ್ರಸಿದ್ಧ ನವೋದ್ಯಮಗಳಾಗಿ ಬೆಳೆದಿವೆ. ಕೊಡಗಿನಲ್ಲಿ ಸಾಂಪ್ರದಾಯಿಕ ಪ್ರವಾಸೋದ್ಯಮವನ್ನು ಆಧುನೀಕರಿಸಲು ಪರಿಸರ ಸ್ನೇಹಿ ಹೋಂಸ್ಟೇ ಬುಕಿಂಗ್ ನೆಟ್‌ವರ್ಕ್ಗಳು, ಚಾರಣ ಮತ್ತು ರ‍್ಯಾಫ್ಟಿಂಗ್ ಮಾರ್ಗದರ್ಶನ ನೀಡುವ ಸಾಹಸ ಪ್ರವಾಸೋದ್ಯಮ ನವೋದ್ಯಮಗಳೂ ಬೆಳೆಯುತ್ತಿವೆ.
ಆನೆ-ಮಾನವ ಸಂಘರ್ಷ, ಹವಾಮಾನ ಬದಲಾವಣೆ ಸೇರಿದಂತೆ ಸ್ಥಳೀಯ ಸಮಸ್ಯೆಗಳಿಗೆ ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಮೂಲಕ ಪರಿಹಾರ ಕಂಡುಕೊಳ್ಳಲು ನವೋದ್ಯಮಗಳಿಗೆ ನೆರವು ನೀಡುವ ಸಂಸ್ಥೆಗಳೂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಂಥ ಸಂಸ್ಥೆಗಳು ಕೊಡಗಿನ ಸ್ಥಳೀಯ ಯುವಕರು ಹಾಗೂ ಎಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ಸ್ವಂತ ನವೋದ್ಯಮಗಳನ್ನು ಪ್ರಾರಂಭಿಸಲು ಇನ್‌ಕ್ಯುಬೇಶನ್ ಮತ್ತು ತಾಂತ್ರಿಕ ನೆರವು ನೀಡುತ್ತಿವೆ.
ಜಿಲ್ಲೆಯ ವಿಶೇಷವಾಗಿರುವ ಕಾಫಿ, ಜೇನುತುಪ್ಪ, ಕಿತ್ತಳೆ, ಬಟರ್‌ಫ್ರೂಟ್, ಪಾರಂಪರಿಕ ಪ್ರವಾಸೋದ್ಯಮಗಳನ್ನು ಸ್ಟಾರ್ಟಪ್‌ಗಳಿಗೆ ಬಳಸಿಕೊಳ್ಳುವ ಬಗ್ಗೆ ಕೊಡಗಿನ ಯುವಕರು ಇತ್ತೀಚಿನ ವರ್ಷಗಳಲ್ಲಿ ವಿಶೇಷ ಆಸಕ್ತಿ ತೋರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೆಲವು ಬ್ರಾö್ಯಂಡ್‌ಗಳು ಈಗಾಗಲೇ ವಿಶ್ವಮಟ್ಟದಲ್ಲಿ ಹೆಸರು ಮಾಡಿವೆ. ಕೆಲವೊಂದು ಸ್ಟಾರ್ಟಪ್‌ಗಳು ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆ ಮೂಲಕ ನೋಂದಾಯಿಸಿಕೊಳ್ಳದಿರುವುದರಿAದ 11ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನವೋದ್ಯಮಗಳು ಕೊಡಗಿನಲ್ಲಿ ಇರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.
ಕೊಡಗು ಜಿಲ್ಲೆ ಮುಖ್ಯವಾಗಿ ಕಾಫಿ, ಮೆಣಸು, ಏಲಕ್ಕಿ ಸೇರಿದಂತೆ ಕೃಷಿ ಆಧಾರಿತ ಪ್ರವಾಸೋದ್ಯಮ ಮತ್ತು ಸಾಂಪ್ರದಾಯಿಕ ಉಪಕಸುಬುಗಳನ್ನು ನೆಚ್ಚಿಕೊಂಡಿದೆ. ಪ್ರಸ್ತುತ ತಂತ್ರಜ್ಞಾನ ಬೆಳೆದಂತೆ ಕಾಫಿ ತೋಟಗಳಿಗೆ ನೀರಾವರಿ ನಿರ್ವಹಣೆ, ರೋಗ ಪತ್ತೆಹಚ್ಚುವ ತಂತ್ರಜ್ಞಾನಗಳು ಹಾಗೂ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಬೆಲೆ ಕಲ್ಪಿಸುವ ಆ್ಯಪ್‌ಗಳು. ಪರಿಸರ ಪ್ರವಾಸೋದ್ಯಮ, ಪಾರಂಪರಿಕ ಪ್ರವಾಸೋದ್ಯಮ, ಸ್ಥಳೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸುಸ್ಥಿರ ಹಾಗೂ ಪರಿಸರ ಸ್ನೇಹಿ ತಾಂತ್ರಿಕ ವೇದಿಕೆಗಳು, ಜೇನುತುಪ್ಪ, ಸುಗಂಧ ದ್ರವ್ಯಗಳು ಸೇರಿದಂತೆ ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆ ತಲುಪಿಸಲು ಇ-ಕಾಮರ್ಸ್ ಮತ್ತು ಬ್ರ‍್ಯಾಂಡಿAಗ್ ನವೋದ್ಯಮಗಳಲ್ಲಿ ದೊಡ್ಡ ಮಟ್ಟದ ಅವಕಾಶಗಳಿವೆ. ಸ್ಥಳೀಯ ನವೋದ್ಯಮಿಗಳು, ಮತ್ತು ಸರ್ಕಾರಿ ಯೋಜನೆಗಳ ನಡುವಿನ ಅಂತರ ಕಡಿಮೆಯಾದಲ್ಲಿ, ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯು ಕೇವಲ ಪ್ರವಾಸಿ ತಾಣವಾಗಿಯಷ್ಟೇ ಅಲ್ಲದೆ, ಪ್ರಾದೇಶಿಕ ನವೋದ್ಯಮಗಳ ಕೇಂದ್ರವಾಗಿ ಮೂಡಿಬರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಪ್ರಮುಖವಾಗಿ ಕೊಡಗು ವೇಗದ ಸಂಪರ್ಕ ಕೊರತೆ ಎದುರಿಸುತ್ತಿದೆ. ರೈಲ್ವೆ ಮತ್ತು ವಿಮಾನಯಾನ ಸೌಲಭ್ಯದ ಅಗತ್ಯ ಜಿಲ್ಲೆಗೆ ಇದೆ. ಉಡಾನ್ ಯೋಜನೆ ಅಡಿಯಲ್ಲಿ ವಿಮಾನ ನಿಲ್ದಾಣ ಯೋಜನೆ ಜಿಲ್ಲೆಗೆ ಆದಷ್ಟು ಶೀಘ್ರ ಬರಬೇಕಿದೆ. ನವೋದ್ಯಮಗಳ ಬಗ್ಗೆ ಈಗಿನ ತಲೆಮಾರಿಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಜಿಲ್ಲೆಯಲ್ಲಿರುವ ಎಂಜಿನಿಯರಿAಗ್ ಕಾಲೇಜು, ಪಾಲಿಟೆಕ್ನಿಕ್‌ಗಳಲ್ಲಿ ಈ ಸಂಬAಧ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿದರೆ ಕೊಡಗಿನಲ್ಲಿ ಇನ್ನೂ ಹೆಚ್ಚಿನ ನವೋದ್ಯಮಗಳ ಆರಂಭವನ್ನು ನಿರೀಕ್ಷೆ ಮಾಡಬಹುದು.
ರಾಜ್ಯದ ಒಟ್ಟು ನವೋದ್ಯಮ ಸಂಸ್ಕೃತಿ ಕೇವಲ ರಾಜಧಾನಿ ಬೆಂಗಳೂರಿಗಷ್ಟೇ ಸೀಮಿತವಾಗಬಾರದು ಎಂಬ ಉನ್ನತ ಉದ್ದೇಶದಿಂದ ಕರ್ನಾಟಕ ಸರ್ಕಾರ ಬಿಯಾಂಡ್ ಬೆಂಗಳೂರು ಮತ್ತು ಲೀಪ್ ಎಂಬ 1 ಸಾವಿರ ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯ ಪ್ರಮುಖ ಗುರಿ ನಾವೀನ್ಯತೆಯನ್ನು ವಿಕೇಂದ್ರೀಕರಿಸುವುದು ಮತ್ತು ದ್ವಿತೀಯ ಹಾಗೂ ತೃತೀಯ ಹಂತದ ಜಿಲ್ಲೆಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿದೆ.