ಮಲ್ಮ ಹಾಕಿ ಕ್ಲಬ್ ಕಕ್ಕಬ್ಬೆ ವತಿಯಿಂದ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿದರು. ಹೆಡಿಕೇರಿ ಪ್ರಸನ್ನ, ಪಳಗಂಡ ಲವಕುಮಾರ್, ಮಾಪಂಗಡ ಯಮುನಾ ಚಂಗಪ್ಪ, ಚೇತನ್, ಬಾಚಮಾಂಡ ಲವ ಚಿಣ್ಣಪ್ಪ ಇತರರು ಇದ್ದರು.
ನಾಪೋಕ್ಲು: ಮಲ್ಮ ಹಾಕಿ ಕ್ಲಬ್ ಕಕ್ಕಬ್ಬೆ ವತಿಯಿಂದ ಹಾಕಿ ಕೂರ್ಗ್ ಸಹಯೋಗದೊಂದಿಗೆ ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಪ್ರಾರಂಭಗೊಂಡ ಜಿಲ್ಲಾ ಹಾಕಿ ಲೀಗ್‌ನ ಟಾಪ್ 8 ತಂಡಗಳ ನಡುವಿನ ಹಾಕಿ ಪಂದ್ಯಾವಳಿಯು ಭಾನುವಾರ ಸಮಾರೋಪಗೊಂಡಿತು.
ಮುಖ್ಯ ಅತಿಥಿ ಶಾಸಕ ಎ.ಎಸ್.ಪೊನ್ನಣ್ಣ ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡ ಬಳಿಕ ಜ್ಯೋತಿ ಬೆಳಗಿ ಪಂದ್ಯಾವಳಿಯ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಮಲ್ಮ ಹಾಕಿ ಕ್ಲಬ್‌ನ ಅಧ್ಯಕ್ಷ ಮಾದಂಡ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹೆಡಿಕೇರಿ ಪ್ರಸನ್ನ, ಹಾಕಿ ಕೂರ್ಗ್ ಅಧ್ಯಕ್ಷ ಪಳಗಂಡ ಲವಕುಮಾರ್, ಉಪಾಧ್ಯಕ್ಷ ಮಾಪಂಗಡ ಯಮುನಾ ಚಂಗಪ್ಪ, ಕಾರ್ಯದರ್ಶಿ ಚೇತನ್, ಬಾಚಮಾಂಡ ಲವ ಚಿಣ್ಣಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಕುಲ್ಲೇಟಿರ ಅರುಣ್ ಬೇಬ, ಅರೆಯಡ ಪವಿನ್ ಪೊನ್ನಣ್ಣ ಸೇರಿದಂತೆ ಪ್ರಮುಖರು ಇದ್ದರು.