ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಕ್ರೀಡಾ ಪರಿಕರಗಳ ವಿತರಣೆ ಸಂದರ್ಭ ಆಲೀರ ರಶೀದ್,ಕುಂಡಂಡ ಎ. ರಜ್ಹಾಕ್, ಇಸ್ಮಾಯಿಲ್,ಆಲೀರ ಎ. ಅಜ್ಹಿಜ್ಹ್, ಅಶ್ರಫ್, ನಿರ್ದೇಶಕರಾದ ಹುಸೈನ್, ಅಬ್ದುಲ್ಲಾ, ಅಬ್ದುಲ್ಲಾ, ರಫೀಕ್ (ಮುನ್ನ) ಮೊದಲಾದವರು ಉಪಸ್ಥಿತರಿದ್ದರು. 
ಕೊಡಗು

ಶಾಲೆಗೆ ಕ್ರೀಡಾ ಪರಿಕರಗಳ ವಿತರಣೆ

ಪ್ರಮುಖ ಮುಖ್ಯಾಂಶಗಳು

  • ಶಾಲೆಗೆ ಕ್ರೀಡಾ ಪರಿಕರಿಗಳನ್ನು ವಿತರಿಸಲಾಯಿತು.
ಪೊನ್ನಂಪೇಟೆ: ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ಸೋಮವಾರ ಪೊನ್ನಂಪೇಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕ್ರೀಡಾ ಪರಿಕರಿಗಳನ್ನು ವಿತರಿಸಲಾಯಿತು.
ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ಡಿ.ಎಚ್. ಮೊಯ್ದು ಅವರು ಪ್ರಾಯೋಜಿಸಿದ್ದ ವಿವಿಧ ಕ್ರೀಡಾ ಪರಿಕರಗಳನ್ನು ಕೆ.ಎಂ.ಎಸ್.ಎ. ಪದಾಧಿಕಾರಿಗಳು ಶಾಲೆಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಪಾಲ್ಗೊಂಡಿದ್ದರು. ಕೆ.ಎಂ.ಎಸ್.ಎ. ಅಧ್ಯಕ್ಷ ಆಲೀರ ರಶೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಎಸ್.ಎ. ಉಪಾಧ್ಯಕ್ಷ ಕುಂಡಂಡ ಎ. ರಜ್ಹಾಕ್, ಪ್ರಧಾನ ಕಾರ್ಯದರ್ಶಿ ಮೀತಲತಂಡ ಇಸ್ಮಾಯಿಲ್, ಕೋಶಾಧಿಕಾರಿ ಆಲೀರ ಎ. ಅಜ್ಹಿಜ್ಹ್, ಜಂಟಿ ಕಾರ್ಯದರ್ಶಿ ಕಣ್ಣಪ್ಪಣೆ ವೈ. ಅಶ್ರಫ್, ನಿರ್ದೇಶಕರಾದ ಆಲೀರ ಎ. ಹುಸೈನ್, ಚಿಮ್ಮಿಚ್ಚಿರ ಕೆ. ಅಬ್ದುಲ್ಲಾ, ಪುಂಜೆರ ಹೆಚ್. ಅಬ್ದುಲ್ಲಾ, ಮಂದಮಾಡ ರಫೀಕ್ (ಮುನ್ನ) ಮೊದಲಾದವರು ಉಪಸ್ಥಿತರಿದ್ದರು.