-ಪಾಲಿಬೆಟ್ಟ ಲಯನ್ಸ್ ಕ್ಲಬ್‌ನ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಚೀಫ್ ಕೋ-ಆರ್ಡಿನೇಟರ್ ಗೀತಾ ಆರ್.ರಾವ್, ನೂತನ ಅಧ್ಯಕ್ಷ ಸದಾ ಕುಶಾಲಪ್ಪ, ಕಮ್ಯುನಿಕೇಷನ್ ಅಧ್ಯಕ್ಷ ಡಾ.ಗಣಪತಿ, ಕಾರ್ಯದರ್ಶಿ ಡಾ.ಭವಿಷ್ಯ ಕುಮಾರ್ ಇತರರು ಇದ್ದರು. 
ಕೊಡಗು

ಜನರ ಅಗತ್ಯ ಆಧರಿಸಿ ಸೇವಾ ಕಾರ್ಯಕ್ರಮ ರೂಪಿಸಿ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಲಯನ್ಸ್ ಜಿಲ್ಲಾ ಚೀಫ್ ಕೋ-ಆರ್ಡಿನೇಟರ್ ಗೀತಾ ಆರ್.ರಾವ್‌ಸಲಹೆ
  • ಪಾಲಿಬೆಟ್ಟ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ
  • ಅಧ್ಯಕ್ಷರಾಗಿ ಸದಾ ಕುಶಾಲಪ್ಪ ಅಧಿಕಾರ ಸ್ವೀಕಾರ
ಸಿದ್ದಾಪುರ: ಸ್ಥಳೀಯ ಸಾರ್ವಜನಿಕರ ಅಗತ್ಯಗಳನ್ನು ಆಧರಿಸಿ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಲಯನ್ಸ್ ಕ್ಲಬ್ ನೂತನ ಆಡಳಿತ ಮಂಡಳಿಗೆ ಲಯನ್ಸ್ ಜಿಲ್ಲಾ ಚೀಫ್ ಕೋ-ಆರ್ಡಿನೇಟರ್ ಗೀತಾ ಆರ್.ರಾವ್ ಸಲಹೆ ನೀಡಿದರು.
ಪಾಲಿಬೆಟ್ಟದ ಲಯನ್ಸ್ ಸೇವಾ ಭವನದ ಅನುಗ್ರಹ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪಾಲಿಬೆಟ್ಟ ಲಯನ್ಸ್ ಕ್ಲಬ್‌ನ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.
ಪಾಲಿಬೆಟ್ಟ ಲಯನ್ಸ್ ಕ್ಲಬ್ ಕಳೆದ ಸಾಲಿನಲ್ಲಿ ವಿವಿಧ ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದನ್ನು ಶ್ಲಾಘಿಸಿದ ಅವರು, ಮುಂದೆಯೂ ಸೇವಾ ಮನೋಭಾವದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಸದಾ ಕುಶಾಲಪ್ಪ, ಕಾರ್ಯದರ್ಶಿಯಾಗಿ ಡಾ.ಭವಿಷ್ಯ ಕುಮಾರ್ ಹಾಗೂ ಖಜಾಂಚಿಯಾಗಿ ರತ್ನಾ ಸುಬ್ಬಯ್ಯ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಡೊಮ್ಮಿ ಪಿ.ರೊಜಾರಿಯೊ ಮತ್ತು ರಾಣಾ ಮುತ್ತಪ್ಪ, ಎಲ್‌ಸಿಐಎಫ್ ಅಧ್ಯಕ್ಷರಾಗಿ ಪಿ.ಎಸ್.ಸುಬ್ರಮಣಿ, ಸೇವಾ ಅಧ್ಯಕ್ಷರಾಗಿ ಪಿ.ಎ.ಅನಂತರಾಮ, ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ ಅಧ್ಯಕ್ಷರಾಗಿ ಡಾ. ಎ.ಸಿ.ಗಣಪತಿ, ಸದಸ್ಯತ್ವ ಅಧ್ಯಕ್ಷರಾಗಿ ಎಂ.ಎನ್.ಅಚ್ಚಯ್ಯ, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಎಂ.ಎಸ್.ರವಿ, ಬೀನಾ ಕುಶಾಲಪ್ಪ ಹಾಗೂ ಶಾರದಾ ಪೊನ್ನಪ್ಪ ಅಧಿಕಾರ ವಹಿಸಿಕೊಂಡರು.
ನಿರ್ದೇಶಕರಾಗಿ ಬಿ.ಪಿ.ಗಣಪತಿ, ಸ್ವರೂಪ್ ಐಯಪ್ಪ, ಕೆ.ಎಂ.ಅಯ್ಯಣ್ಣ, ಮೀರಾ ಸುಬ್ರಮಣಿ, ಅನಿತಾ ರವಿ, ಕನಿಕಾ ಅಯ್ಯಪ್ಪ, ನಿಶಾ ಗಣಪತಿ, ಇನಿತಾ ನಾಚಪ್ಪ ಹಾಗೂ ಸರೋಜಾ ಪೊನ್ನಪ್ಪ ಪ್ರಮಾಣ ವಚನ ಸ್ವೀಕರಿಸಿದರು.