ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಶಿಬಿರಾರ್ಥಿಗಳಿಂದ ಆರ್ಕಿಡ್ ಕೃಷಿಯ ಪ್ರಾತ್ಯಕ್ಷಿಕೆ ನಡೆಯಿತು. ಡಾ. ಜಡೇಗೌಡ, ಶೈಲೇಶ್, ಮುಕುಂದ, ವಸಂತ್, ನರೇನ್ ಇದ್ದರು.
ವಿರಾಜಪೇಟೆ: ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆಯ ಗ್ರಾಮೀಣ ಕಾರ್ಯಾನುಭವ ಶಿಬಿರದ ಶಿಬಿರಾರ್ಥಿಗಳಿಂದ ಬೇಟೋಳಿ ಗ್ರಾಮದಲ್ಲಿ ರೈತರಿಗಾಗಿ ಆರ್ಕಿಡ್ ಕೃಷಿ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ರೈತ ಶೈಲೇಶ್ ಅವರ ಮನೆಯಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಜಡೇಗೌಡ ಅವರು ರೈತರಿಗೆ ಆರ್ಕಿಡ್ ಬೆಳೆಗಾರಿಕೆಯ ವೈಜ್ಞಾನಿಕ ವಿಧಾನಗಳನ್ನು ಪ್ರಾಯೋಗಿಕವಾಗಿ ವಿವರಿಸಿದರು. ಪ್ರಾತ್ಯಕ್ಷಿಕೆಯಲ್ಲಿ ಆರ್ಕಿಡ್ ಬೆಳೆಗೆ ಸೂಕ್ತವಾದ ಮೀಡಿಯಾ ತಯಾರಿಕೆ, ಹೂಕುಂಡ ತುಂಬುವ ವಿಧಾನ, ಮೌಂಟಿಂಗ್ ತಂತ್ರ, ನೆಡುವ ವಿಧಾನ, ನೀರಾವರಿ, ಪೋಷಕಾಂಶ ನಿರ್ವಹಣೆ ಹಾಗೂ ಆರೈಕೆ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಉತ್ತಮ ಗುಣಮಟ್ಟದ ಆರ್ಕಿಡ್ ಬೆಳೆಯಲು ಅನುಸರಿಸಬೇಕಾದ ಪ್ರಮುಖ ಅಂಶಗಳನ್ನು ರೈತರಿಗೆ ತಿಳಿಸಿದರು.
ರೈತರಾದ ವಸಂತ್, ಶೈಲೇಶ್, ಮುರಳಿ, ನರೇನ್ , ಮುಕುಂದ , ಮುತ್ತಮ್ಮ, ಗಾನಗೌರಮ್ಮ , ಪ್ರಮೀಳಾ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.