ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ನಗರದ ಪೌರ ಕಾರ್ಮಿಕರಿಗೆ ರೈನ್ ಕೋಟ್ ವಿತರಿಸಲಾಯಿತು. ಪೂಜ ಸಜೇಶ್ , ಪ್ರತಿಮಾ ರಂಜನ್, ಮೀರಾ ಪೂಣಚ್ಚ, ರಿಚರ್ಡ್ ಇದ್ದರು.  
ಕೊಡಗು

ವಿದ್ಯಾರ್ಥಿಗಳಲ್ಲಿ ಕಲಿಕೆಯೊಂದಿಗೆ ಸಂಸ್ಕಾರ ಮುಖ್ಯ

ಪ್ರಮುಖ ಮುಖ್ಯಾಂಶಗಳು

  • ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥ ಪೂಜಾ ಸಜೇಶ್ ಹೇಳಿಕೆ

ವಿರಾಜಪೇಟೆ:

ವಿರಾಜ ಪೇಟೆಯ ಮಗ್ಗುಲದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಎಲ್‌ಎಸ್‌ಎ ಕೇರ್ಸ್ ವತಿಯಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು, ಅದರಂತೆ ಈ ಬಾರಿಯೂ ಸಂಸ್ಥೆಯ ವತಿಯಿಂದ ಆಡಳಿತ ಮಂಡಳಿ ಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳು ಇತ್ತೇಚೆಗೆ ವಿರಾಜಪೇಟೆ ಪೊಲೀಸ್ ಠಾಣೆಗಳಿಗೆ ತೆರಳಿ ಅಲ್ಲಿನ ಸಿಬ್ಬಂದಿ ರೈನ್ ಕೋಟನ್ನು ವಿತರಿಸಿದರು.

ವಿರಾಜಪೇಟೆ ನಗರದ ಪೌರಕಾರ್ಮಿಕರಿಗೆ ರೈನ್ ಕೋಟ್‌ಗಳನ್ನು ಹಾಗೂ ಹೆಗ್ಗಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಅಲ್ಲಿನ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥ ಪೂಜಾ ಸಜೇಶ್ ಮಾತನಾಡಿ, ನಮ್ಮ ವಿದ್ಯಾ ಸಂಸ್ಥೆಯ ಎಲ್‌ಎಸ್‌ಎ ಕೇರ್ ವತಿಯಿಂದ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು ಇಂದು ರೈನ್ ಕೋಟ್ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಂಬರುವ ತಿಂಗಳುಗಳಲ್ಲಿ ವೃದ್ಧಾಶ್ರಮ, ಅನಾಥಾಶ್ರಮ ಹಾಗೂ ಇತರ ಸಮಾಜ ಸೇವಾ ಸಂಸ್ಥೆಗಳಿಗೆ ಭೇಟಿ ನೀಡಿ ಅಗತ್ಯ ಸಹಾಯ ಮತ್ತು ಸೇವಾ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಈಗಿನಿಂದಲೇ ಕಲಿಕೆ ,ಸೇವೆ ಹಾಗೂ ಸಂಸ್ಕಾರವನ್ನು ಮೂಡಿಸಲು ಸಂಸ್ಥೆಯು ಎಲ್ಲ ರೀತಿಯಲ್ಲಿಯೂ ಪಣ ತೊಟ್ಟಿದೆ ಎಂದರು.
ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಕಾರ್ಯದರ್ಶಿ ಪ್ರತಿಮಾ ರಂಜನ್, ಮುಖ್ಯ ಶಿಕ್ಷಕಿ ಮೀರಾ ಪೂಣಚ್ಚ, ಕ್ಯಾಂಪಸ್ ನಿರ್ವಹಣೆಗಾರರಾದ ರಿಚರ್ಡ್, ಶಾಲಾ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.