ಆಲೂರುಸಿದ್ದಾಪುರ ಅದಿತಿ ನರ್ಸರಿ ಶಾಲೆ ವಾರ್ಷಿಕೋತ್ಸವ ಅಂಗವಾಗಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.  
ಕೊಡಗು

ಮಕ್ಕಳ ಕಲಿಕೆಗೆ ಆಸಕ್ತಿ ಮೂಡಿಸಿದರೆ ಕೌಶಲ ಅಭಿವೃದ್ಧಿಗೆ ಪೂರಕ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ಶಿಕ್ಷಕಿ ಕೆ.ಪಿ.ರೀನಾ ಅಭಿಮತ
ಶನಿವಾರಸಂತೆ: ಸಮೀಪದ ಆಲೂರುಸಿದ್ದಾಪುರದ ಅದಿತಿ ಲಿಟ್ಲ್ ಫೀಟ್ಸ್ ಕಿಂಡರ್‌ಗಾರ್ಟನ್ ನರ್ಸರಿ ಶಾಲೆ ವಾರ್ಷಿಕೋತ್ಸವ ಸಾಂಸ್ಕೃತಿಕ ಹಬ್ಬ ಮತ್ತು ಪಾಲಕರ ಕ್ರೀಡೋತ್ಸವನ್ನು ಕಾರ್ಯಕ್ರಮ ಆಯೋಜಿಸಲಾಗಿತ್ತು.
ನರ್ಸರಿ ಶಾಲೆ ಸಂಸ್ಥಾಪಕ ಅಧ್ಯಕ್ಷೆ ಮತ್ತು ಮುಖ್ಯ ಶಿಕ್ಷಕಿ ಕೆ.ಪಿ.ರೀನಾ ಮಾತನಾಡಿ, ನರ್ಸರಿ ಹಂತದ ಮಕ್ಕಳಲ್ಲಿ ಪ್ರಾರಂಭದಲ್ಲೇ ಅಕ್ಷರ ಜ್ಞಾನ, ಕಲಿಕೆ ಬಗ್ಗೆ ಆಸಕ್ತಿ ಮೂಡಿಸುವುದು ಹಾಗೂ ಕನ್ನಡ ಮತ್ತು ಆಂಗ್ಲ ಭಾಷೆ ಕಲಿಕೆಗೆ ಪ್ರೋತ್ಸಾಹಿಸಿದರೆ ಮಕ್ಕಳ ಕಲಿಕೆಗೆ ಮತ್ತು ಕೌಶಲ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.
ರೋಟರಿ ಕ್ಲಬ್ ಸದಸ್ಯ ಎ.ಎಸ್.ರಾಮಣ್ಣ ಮಾತನಾಡಿದರು. ಪ್ಯಾಕ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಲೀಲಾಕುಮಾರ್, ಗ್ರಾ.ಪಂ. ಸದಸ್ಯರಾದ ದಮಯಂತಿ ಕರುಂಬಯ್ಯ, ಪಿ.ಎಸ್.ಸತೀಶ್‌ಕುಮಾರ್, ನಿವೃತ್ತ ಶಿಕ್ಷಕಿ ಎಚ್.ಎನ್.ರಾಗಿಣಿ ಇತರರು ಇದ್ದರು.