ವಿರಾಜಪೇಟೆ ತಾಲೂಕು ಮಠ ಗ್ರಾಮದಲ್ಲಿ ಬುಧವಾರ ಹುಲಿ ದಾಳಿಗೆ ಹಸು ಬಲಿಯಾಗಿರುವುದು.  
ಕೊಡಗು

ಹುಲಿ ದಾಳಿಗೆ ಹಸು ಬಲಿ

ಮಾದೇಶ್ ತಿ.ನರಸೀಪುರ
ಸಿದ್ದಾಪುರ: ವಿರಾಜಪೇಟೆ ತಾಲೂಕು ಮಠ ಗ್ರಾಮದಲ್ಲಿ ಬುಧವಾರ ಹುಲಿ ದಾಳಿಗೆ ಹಸು ಬಲಿಯಾಗಿದೆ.
ಗ್ರಾಮದ ನಿವಾಸಿ ಶಾರ್ಲಿ ಅವರ ಹಾಲು ಕರೆಯುತ್ತಿದ್ದ ಹಸುವನ್ನು ಮನೆ ಸಮೀಪದ ಗದ್ದೆಯಲ್ಲಿ ಮೇಯಲು ಕಟ್ಟಲಾಗಿತ್ತು. ಸಂಜೆ ಸಮಯದಲ್ಲಿ ಹಸುವನ್ನು ನೋಡಲು ತೆರಳಿದಾಗ ಅದು ಮೃತಪಟ್ಟಿರುವುದು ಕಂಡುಬಂದಿದೆ. ಪರಿಶೀಲನೆ ವೇಳೆ ಹಸುವಿನ ಕುತ್ತಿಗೆಯ ಭಾಗದಲ್ಲಿ ಗಂಭೀರ ಗಾಯಗಳ ಗುರುತು ಕಂಡುಬಂದಿದ್ದು, ಹುಲಿ ದಾಳಿ ನಡೆಸಿ ಹಸುವನ್ನು ಸಾಯಿಸಿರುವುದು ದೃಢಪಟ್ಟಿದೆ.
ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ಶಶಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.