ಬೀದಿನಾಯಿಗಳು ಹಸುವನ್ನು ಕೊಂಡು ಹಾಕಿರುವುದು. 
ಕೊಡಗು

ಬೀದಿ ನಾಯಿಗಳ ದಾಳಿಗೆ ಹಸು ಬಲಿ

ಪ್ರಮುಖ ಮುಖ್ಯಾಂಶಗಳು

  • ಬೀದಿ ನಾಯಿಗಳು ದಾಳಿ
ನಾಪೋಕ್ಲು: ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ಜಾನುವಾರಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿ ಕೊಂದು ಹಾಕಿದ್ದು, ಸ್ಥಳೀಯರಲ್ಲಿ ಜೀವ ಭಯದ ವಾತಾವರಣ ನಿರ್ಮಾಣವಾಗಿದೆ.
ಅಯ್ಯಂಗೇರಿ ಗ್ರಾಮದ ನಿವಾಸಿ ಮೊಹಮ್ಮದ್ ಪಳ್ಳಿ ಅವರು ತಮ್ಮ ಗದ್ದೆಯಲ್ಲಿ ಶನಿವಾರ ಮೇಯಲು ಹಸುಗಳನ್ನು ಬಿಟ್ಟಿದ್ದ ಸಂದರ್ಭ ಬೀದಿ ನಾಯಿಗಳು ಕಚ್ಚಿ ರಂಪಾಟ ಮಾಡಿವೆ. ದಾಳಿ ಮಾಡಿದ ನಾಯಿಗಳು ಒಂದು ಹಸುವನ್ನು ಕಚ್ಚಿ ಕೊಂದಿದಲ್ಲದೆ ಬಹುತೇಕ ಭಾಗಗಳನ್ನು ತಿಂದು ಹಾಕಿವೆ. ಇತರ ಮೂರು ನಾಲ್ಕು ಜಾನುವಾರುಗಳನ್ನೂ ಕಚ್ಚಿ ಗಾಯಗೊಳಿಸಿವೆ. ಬಲ್ಲಮಾವಟ್ಟಿ ಪಶುವೈದ್ಯ ಡಾ.ಚೇತನ್ ಭೇಟಿ ನೀಡಿ ಗಾಯಗೊಂಡ ಜಾನುವಾರುಗಳಿಗೆ ಚಿಕಿತ್ಸೆ ನೀಡಿದರು. ಮೃತ ಹಸುವನ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿದರು.