ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಕೂರ್ಗ್ ಚಾಂಪಿಯನ್ ಶಿಪ್ ಕಪ್‌ನ ವಿಜೇತರಿಗೆ ಬಹುಮಾನ ನೀಡಲಾಯಿತು. ರಚನ್ ಪೊನ್ನಪ್ಪ, ಎಂ.ಸುಬ್ರಮಣಿ ನಾಣಯ್ಯ ಇದ್ದರು.
- ಕೂರ್ಗ್ ಚಾಂಪಿಯನ್ ಶಿಪ್ ಕಪ್ ಸಮಾರೋಪ
ಮಡಿಕೇರಿ: ಕೂರ್ಗ್ ಟೇಬಲ್ ಟೆನ್ನಿಸ್ ಯೂತ್ ಅಸೋಸಿಯೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಕೂರ್ಗ್ ಚಾಂಪಿಯನ್ ಶಿಪ್ ಕಪ್-೨೦೨೬ ಪಂದ್ಯಾವಳಿ ಸಮಾರೋಪಗೊಂಡಿತು.
ವಿಜೇತರ ವಿವರ: ೧೬ ವರ್ಷದೊಳಗಿನ ಬಾಲಕಿಯರ ವಿಭಾಗದ ಸಿಂಗಲ್ಸ್‌ನಲ್ಲಿ ಅಹಲ್ಯ ಪ್ರಥಮ, ಲಿಪಿಕಾ ದ್ವಿತೀಯ ಸ್ಥಾನ ಪಡೆದರು. ಬಾಲಕರ ವಿಭಾಗದಲ್ಲಿ ಮಡಿಕೇರಿಯ ಅವಿನಾಶ್(ಪ್ರ), ಲಿತೇಶ್(ದ್ವಿ) ಸ್ಥಾನ ಪಡೆದರು. ೨೧ ವರ್ಷದೊಳಗಿನ ಬಾಲಕಿಯರ ವಿಭಾಗದ ಸಿಂಗಲ್ಸ್‌ನಲ್ಲಿ ಲಿಪಿಕಾ(ಪ್ರ), ಶೀತಲ್ ದ್ವಿತೀಯ ಸ್ಥಾನ ಪಡೆದರು.
೨೧ ವರ್ಷದೊಳಗಿನ ಬಾಲಕಿಯರ ಡಬಲ್ಸ್‌ನಲ್ಲಿ ಅಹಲ್ಯ ಹಾಗೂ ನಿಮ್ರಾ(ಪ್ರ), ಅನುಷ್ಕಾ ಹಾಗೂ ಲಿಪಿಕಾ ದ್ವಿತೀಯ ಸ್ಥಾನ ಪಡೆದರು. ಬಾಲಕರ ವಿಭಾಗದಲ್ಲಿ ಸಿಂಗಲ್ಸ್‌ನಲ್ಲಿ ಲಿತೇಶ್(ಪ್ರ), ಐಜಾನ್ ದ್ವಿತೀಯ ಸ್ಥಾನ ಪಡೆದರು. ಡಬಲ್ಸ್‌ನಲ್ಲಿ ಅವನೀಶ್ ಹಾಗೂ ಐಜಾನ್(ಪ್ರ), ಲಿತೇಶ್ ಹಾಗೂ ಸ್ಕಂದ ದ್ವಿತೀಯ ಸ್ಥಾನ ಪಡೆದರು.
೩೦ ವರ್ಷ ಮೇಲ್ಪಟ್ಟವರ ಪುರುಷರ ವಿಭಾಗ ಡಬಲ್ಸ್‌ನಲ್ಲಿ ಮಲ್ಲೇಂಗಡ ರಚನ್ ಪೊನ್ನಪ್ಪ ಹಾಗೂ ಡೇರಿಕ್ ಡಿಸೋಜ(ಪ್ರ), ಪೊನ್ನಂಪೇಟೆಯ ಈಶ್ವರ್ ಹಾಗೂ ಲಿತೇಶ್ ದ್ವಿತೀಯ. ಪುರುಷರ ಸಿಂಗಲ್ಸ್‌ನಲ್ಲಿ ಮಲ್ಲೇಂಗಡ ರಚನ್ ಪೊನ್ನಪ್ಪ (ಪ್ರ), ಪೊನ್ನಂಪೇಟೆಯ ಈಶ್ವರ್ ದ್ವಿತೀಯ ಬಹುಮಾನ ಪಡೆದರು. ಮಿಕ್ಸಡ್ ಡಬಲ್ಸ್‌ನಲ್ಲಿ ಮಲ್ಲೇಂಗಡ ರಚನ್ ಪೊನ್ನಪ್ಪ, ಮಡಿಕೇರಿಯ ರೀತ್ ಗಣಪತಿ ಮೇಕತಂಡ ಪ್ರಥಮ, ಪೊನ್ನಪೇಟೆಯ ಈಶ್ವರ್ ಹಾಗೂ ಲಿಪಿಕಾ ದ್ವಿತೀಯ, ವೆಟರನ್ಸ್ ನಲ್ಲಿ ಪ್ರವೀಣ್ ಶೇಟ್ ಪ್ರಥಮ ಹಾಗೂ ಮಹಮ್ಮದ್ ಅಸಿಫ್ ದ್ವಿತೀಯ ಸ್ಥಾನ ಬಹುಮಾನ ಗಳಿಸಿದರು.
ಮಹಿಳಾ ಸಿಂಗಲ್ಸ್‌ನಲ್ಲಿ ರೀತ್ ಗಣಪತಿ ಮೇಕತಂಡ(ಪ್ರ) ಹಾಗೂ ನಮಿತಾ ಪೂವಣ್ಣ ಬಾಚಮಂಡ(ದ್ವಿ), ಮಹಿಳಾ ಡಬಲ್ಸ್‌ನಲ್ಲಿ ರೀತ್ ಗಣಪತಿ ಮೇಕತಂಡ ಹಾಗೂ ಕದನೂರಿನ ಸ್ವಾತಿ ತಂಗಮ್ಮ ಚೌರಿರ(ಪ್ರ), ನಾಪೋಕ್ಲುವಿನ ನಮಿತಾ ಪೂವಣ್ಣ ಬಾಚಮಂಡ ಹಾಗೂ ನಾಪೋಕ್ಲುವಿನ ಪೂಜಾ ಕುಟ್ಟಪ್ಪ ಬಾಚಮಂಡ ದ್ವಿತೀಯ ಸ್ಥಾನ ಪಡೆದರು.
ಕೂರ್ಗ್ ಟೇಬಲ್ ಟೆನ್ನಿಸ್ ಯೂತ್ ಅಸೋಸಿಯೇಷನ್‌ನ ಅಧ್ಯಕ್ಷ ಮಲ್ಲೇಂಗಡ ರಚನ್ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಲ್ಲೇಂಗಡ ಬಬಿನ್ ಬೋಪಣ್ಣ ಹಾಗೂ ಜೀಬ್ರ ರಾಕ್ಸ್ ಸಂಸ್ಥೆಯ ಮಾಲೀಕ ಎಂ.ಸುಬ್ರಮಣಿ ನಾಣಯ್ಯ ಅವರು ಬಹುಮಾನ ವಿತರಿಸಿದರು. ಪಂದ್ಯಾವಳಿಯ ವಿಜೇತರಿಗೆ ಆಕರ್ಷಕ ಟ್ರೋಫಿ, ಪದಕ ಮತ್ತು ಪ್ರಶಂಸನಾ ಪತ್ರ ನೀಡಲಾಯಿತು.