ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಮಕ್ಕಳು ಹಾಗೂ ಕುವೆಂಪು ಬಡಾವಣೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ .ಕೆ.ದಯಾನಂದ ಇತರರು ಇದ್ದರು. 
ಕೊಡಗು

ಕುವೆಂಪು ಪುತ್ಥಳಿ ನಿರ್ಮಾಣಕ್ಕೆ ಚಿಂತನೆ

ಪ್ರಮುಖ ಮುಖ್ಯಾಂಶಗಳು

  • ವಾರ್ಷಿಕೋತ್ಸವ ಸಮಾರಂಭದಲ್ಲಿ ಎಂ .ಕೆ.ದಯಾನಂದ ಹೇಳಿಕೆ
ಕುಶಾಲನಗರ: ಕುಶಾಲನಗರ ಪುರಸಭಾ ವ್ಯಾಪ್ತಿಯ ಮುಳ್ಳುಸೋಗೆಯಲ್ಲಿ ಕುವೆಂಪು ಬಡಾವಣೆಯ ಹಿತರಕ್ಷಣಾ ಸಮಿತಿ ವಾರ್ಷಿಕೋತ್ಸವ ಸಮಾರಂಭ ಭಾನುವಾರ ಬಡಾವಣೆಯ ಉದ್ಯಾನದಲ್ಲಿ ಆಯೋಜಿಸಲಾಗಿತ್ತು.
ಬಡಾವಣೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ .ಕೆ. ದಯಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡಾವಣೆಗೆ ಸಂಭವನೀಯ ಪ್ರವಾಹ ತಡೆಗೆ ಕೆಲ ವರ್ಷಗಳ ಹಿಂದೆ 4 ಕೋಟಿ ರೂ.ವೆಚ್ಚದಲ್ಲಿ ಕಾವೇರಿ ನದಿ ಅಂಚಿನಲ್ಲಿ ತಡೆಗೋಡೆ ನಿರ್ಮಾಣವಾಗಿದ್ದು, ಬಡಾವಣೆ ಪ್ರವೇಶ ದ್ವಾರದಲ್ಲಿ ಸ್ವಾಗತ ಕಮಾನು ಹಾಗೂ ಕುವೆಂಪು ಪುತ್ಥಳಿ ನಿರ್ಮಾಣ ಮಾಡುವ ಚಿಂತನೆ ಹೊಂದಲಾಗಿದೆ ಎಂದು ಹೇಳಿದರು.
ವಾರ್ಷಿಕೋತ್ಸವ ಅಂಗವಾಗಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ 13 ಪೌರ ಕಾರ್ಮಿಕರನ್ನು ವಿಶೇಷವಾಗಿ ಆಹ್ವಾನಿಸಿ ಮಧ್ಯಾಹ್ನದ ಭೋಜನದೊಂದಿಗೆ ನಗದು ಕಾಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆ ಕಾರ್ಯದರ್ಶಿ ಬೀನಾ ಅನಿಲ್ ಕುಮಾರ್, ಖಜಾಂಚಿ ಬಿ.ಎಂ. ರವೀಂದ್ರ, ಸಲಹೆಗಾರ ಕೆ .ಜಿ. ಚಂದ್ರಶೇಖರ್, ನಿರ್ದೇಶಕ ಸಿ. ಕೆ. ಹೇಮಂತ್, ಅಮರಾವತಿ, ಪ್ರಕಾಶ್, ಬುಟ್ಟಂಡ ಪಿ.ಶರಿ ಕಾರ್ಯಪ್ಪ, ಚಂದ್ರಶೇಖರ್, ಬಿ.ಎಂ.ರವೀಂದ್ರ ಇದ್ದರು.