ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ನಾಗೇಶ್ ಕುಂದಲ್ಪಾಡಿ ಮಾತನಾಡಿದರು .ಪ್ರಕೃತಿ ಪೊನ್ನಮ್ಮ, ಉದಯ್‌ಕುಮಾರ್, ನಂಜಪ್ಪ ನಿಡ್ಯಮಲೆ, ಪಿ.ಎಂ.ಅಶೋಕ ಇದ್ದರು.
- ಕಾಫಿ ಬೆಳೆ ಕುರಿತು ಬೆಳೆಗಾರರಿಗೆ
- ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
ನಾಪೋಕ್ಲು: ಕಾಫಿ ಬೆಳೆ ಕುರಿತು ಬೆಳೆಗಾರರಿಗೆ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಕಾಫಿ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಾದ ಡಾ.ಎಸ್.ಎ.ನಾಡಫ್, ಡಾ.ಬಿ.ಆರ್.ಶಿವಲಿಂಗು, ಪವನ್ ರೈತ ಸದಸ್ಯರಿಗೆ ಕಾಫಿ ಬೆಳೆ ಬಗ್ಗೆ ಸ್ಲೈಡ್ (ಕಿರುಚಿತ್ರ ಪರದೆ) ಮೂಲಕ ವಿಸ್ತೃತ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪಿ.ಎಂ.ಅಶೋಕ, ಸಕ್ಡೆನ್ ಕಾಫಿ ಇಂಡಿಯಾ ಲಿಮಿಟೆಡ್‌ನ ಕುಶಾಲನಗರ ಸಂಯೋಜಕ ಪ್ರಕೃತಿ ಪೊನ್ನಮ್ಮ, ಉದಯ್‌ಕುಮಾರ್ ವೇದಿಕೆಯಲ್ಲಿದ್ದರು. ಕಾರ್ಯಗಾರದಲ್ಲಿ ಸಂಘದ ನಿರ್ದೇಶಕರು ಹಾಗೂ ಆಸಕ್ತ ರೈತ ಸದಸ್ಯರು ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಸಂಪನ್ಮೂಲ ವ್ಯಕ್ತಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸಹ ಭೋಜನದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.