ಶನಿವಾರಸಂತೆ ಸಮೀಪದ ಮುಳ್ಳೂರು ನಟೇಶ್ ಅವರ ಕುರಿ ಕೊಟ್ಟಿಗೆಯಲ್ಲಿ ಸೇರಿಕೊಂಡಿದ್ದ ನಾಗರಹಾವನ್ನು ನಿವೃತ್ತ ಸೈನಿಕ ಸ್ನೇಕ್ ನಾಗರಾಜ್ ಹಿಡಿದು ರಕ್ಷಿಸುತ್ತಿರುವುದು. 
ಕೊಡಗು

ಕೊಟ್ಟಿಗೆಯಲ್ಲಿ ಸೇರಿಕೊಂಡಿದ್ದ ನಾಗರಹಾವು ರಕ್ಷಣೆ

ಎಂ.ರವಿ

ಶನಿವಾರಸಂತೆ: ಸಮೀಪದ ಮುಳ್ಳೂರು ಗ್ರಾಮದ ನಟೇಶ್ ಎಂಬುವರ ಕುರಿಯ ಕೊಟ್ಟಿಗೆಯಲ್ಲಿ ಶುಕ್ರವಾರ ರಾತ್ರಿ ಸುಮಾರು ನಾಲ್ಕೂವರೆ ಅಡಿ ಉದ್ದದ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ.

ಹಾವು ಬಂದು ಕೊಟ್ಟಿಗೆಯಲ್ಲಿ ಸೇರಿಕೊಂಡಿದ್ದನ್ನು ಗಮನಿಸಿದ ನಟೇಶ್ ಅವರು ದಸಸನಿವೃತ್ತ ಸೈನಿಕ ಸ್ನೇಕ್ ನಾಗರಾಜ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ನಾಗರಾಜ್ ನಾಗರಹಾವನ್ನು ಹಿಡಿದು ರಕ್ಷಿಸಿ ನಂತರ ಅದನ್ನು ಪಕ್ಕದ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.