ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಆಚರಿಸಲಾದ 32ನೇ ವರ್ಷದ ವಾರ್ಷಿಕ ಕೊಡವ ಸಾರ್ವಜನಿಕ ಹುತ್ತರಿ (ಪುತ್ತರಿ) ಹಬ್ಬದ ಸಂದರ್ಭದಲ್ಲಿ ಕದಿರು ತೆಗೆಯಲಾಯಿತು. ಎನ್.ಯು. ನಾಚಪ್ಪ, ಕಿರಿಯಮಾಡ ಶಾನ್, ಬೊಟ್ಟಂಗಡ ಗಿರೀಶ್, ಅಪ್ಪೆಂಗಡ ಮಾಲೆ ಪೂಣಚ್ಚ, ಚೊಕ್ಕಂಡ ಕಟ್ಟಿ ಪಳಂಗಪ್ಪ, ಪಾರ್ವಂಗಡ ನವೀನ್, ಜಮ್ಮಡ ಮೋಹನ್ ಮತ್ತಿತರರು ಇದ್ದರು.
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 32ನೇ ವರ್ಷದ ವಾರ್ಷಿಕ ಕೊಡವ ಸಾರ್ವಜನಿಕ ಹುತ್ತರಿ (ಪುತ್ತರಿ) ಹಬ್ಬವನ್ನು ಕೊಡವ ಪಂಚಾAಗದ ಪ್ರಕಾರ ದಕ್ಷಿಣ ಕೊಡಗಿನ ಬಾಳೆಲೆ ಬಳಿಯ ಬಿಳೂರು ಗ್ರಾಮದ ಕಾಂಡೆರ ಸುರೇಶ್ ಅವರ ಭತ್ತದ ಗದ್ದೆಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆಗೆ ಕದಿರು ತೆಗೆಯುವ ಮೂಲಕ ಆಚರಿಸಲಾಯಿತು.
ಇದಕ್ಕೂ ಮೊದಲು ದುಡಿಕೊಟ್ಟ್-ಪಾಟ್ ಮೂಲಕ ಗದ್ದೆಗೆ ಮೆರವಣಿಗೆಯಲ್ಲಿ ತೆರಳಿ ಗಾಳಿಯಲ್ಲಿ ಗುಂಡುಹಾರಿಸಲಾಯಿತು. ಕೊಡವ ಆಟ್-ಪಾಟ್ ನಡೆಯಿತು. ಮಾನವ ಸರಪಳಿ ಮೂಲಕ ವಿಶ್ವ ರಾಷ್ಟç ಸಂಸ್ಥೆಯ ಘೋಷಣೆಯ ಪ್ರಕಾರ ಅತ್ಯಂತ ಸಣ್ಣ ಪ್ರಾಚೀನ ಬುಡಕಟ್ಟಾದ ಕೊಡವರಿಗೆ ಅಂತರರಾಷ್ಟಿçÃಯ ಕಾನೂನಡಿಯಲ್ಲಿ ಭದ್ರತೆ ಮತ್ತು ರಾಜ್ಯಾಂಗ ಖಾತ್ರಿಗಾಗಿ ಸೂರ್ಯ-ಚಂದ್ರ, ಜಲದೇವಿ ಕಾವೇರಿ, ಸಂವಿಧಾನ ಮತ್ತು ಗುರು-ಕಾರೋಣರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಈ ಸಂದರ್ಭ
ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವ ನೇತೃತ್ವದಲ್ಲಿ (ಹುತ್ತರಿ) ಪುತ್ತರಿ ಉತ್ಸವ ನಡೆಯಿತು. ಕೊಡಗಿನ ಹೊರಗೆ ಪಸರಿಸಿರುವ ಕೊಡವರು ಸೇರಿದಂತೆ ಎಲ್ಲಾ ಕೊಡವರ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಮತ್ತು ಸಮಸ್ತ ಜನರು ಸಮೃದ್ಧಿ ಮತ್ತು ನೆಮ್ಮದಿಯಿಂದ ಬದುಕಲು ಈ ಸಂದರ್ಭ ಪ್ರಾರ್ಥಿಸಲಾಯಿತು. ಈ ವೇಳೆ ಮಾತನಾಡಿದ ಎನ್.ಯು. ನಾಚಪ್ಪ ಕೊಡವ
ಪುತ್ತರಿ ಹಬ್ಬ ಆದಿಮಸಂಜಾತ ಕೊಡವ ಜನಾಂಗೀಯ ಹಬ್ಬಗಳ ಕ್ಯಾಲೆಂಡರ್‌ಗಳಲ್ಲಿ ಪ್ರಮುಖ ಹಬ್ಬವಾಗಿದೆ. ಪುತ್ತರಿ ಕೊಡವ ಜನಾಂಗದ ಕೊಯ್ಲು ಹಬ್ಬ. ಪುತ್ತರಿ ಎಂಬುದು ತಮಿಳು ಕ್ಯಾಲೆಂಡರ್‌ನ ಪೊಂಗಲ್ ಮತ್ತು ಸಿಖ್ಖರ ಬೈಸಾಕಿಯಂತೆ. ಪುತ್ತರಿಯು ಗದ್ದೆಯಿಂದ ಹೊಸ ಅಕ್ಕಿ ಅಥವಾ ಭತ್ತವನ್ನು ಅಂದರೆ ಆಹಾರ ಧಾನ್ಯವನ್ನು ಮನೆಗೆ ಸ್ವಾಗತಿಸುವುದನ್ನು ಸಂಕೇತಿಸುತ್ತದೆ. ಇದು ಸಮೃದ್ಧಿಯ ಸಂಕೇತವಾಗಿದೆ.
ಸಂವಿಧಾನದಡಿಯಲ್ಲಿ ಸೂಕ್ಷ÷್ಮ ಕೊಡವ ಜನಾಂಗಕ್ಕೆ ಆಂತರಿಕ ರಾಜಕೀಯ-ಧಾರ್ಮಿಕ, ಜನಾಂಗೀಯ-ಸಾAಸ್ಕöÈತಿಕ ಮತ್ತು ಸಾಮಾಜಿಕ-ಜಾನಪದ ಸ್ವ-ನಿರ್ಣಯದ ಹಕ್ಕುಗಳೊಂದಿಗೆ ಪವಿತ್ರ ಕೊಡವ ತಾಯ್ನಾಡು ಕೊಡವ ಲ್ಯಾಂಡ್ ಅನ್ನು ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ಪುನಃ ಸ್ಥಾಪಿಸಲು ಮತ್ತು ನಮ್ಮ ನೆಲ, ಭಾಷೆ, ಜಾನಪದ ಸಾಂಸ್ಕöÈತಿಕ ಪರಂಪರೆ, ಐತಿಹಾಸಿಕ ಪರಂಪರೆ, ಸಾಂಪ್ರದಾಯಿಕತೆ ಈ ಮಣ್ಣಿನಲ್ಲಿ ಕೊಡವ ಜನಾಂಗದ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ÷್ಯ ಬಯಸಿ ಸಾಂವಿಧಾನ ಖಾತರಿಗಾಗಿ ಸಿಎನ್‌ಸಿ ಕಳೆದ ಮೂರುವರೆ ದಶಕಗಳಿಂದ ಸಾರ್ವತ್ರಿಕವಾಗಿ ಧಾರ್ಮಿಕ, ಜನಪದ ಉತ್ಸಾಹದ ಮೂಲಕ ಎಲ್ಲಾ ಕೊಡವ ಹಬ್ಬಗಳು ಮತ್ತು ಆಚರಣೆಗಳನ್ನು ಪುನರುಜ್ಜೀವನಗೊಳಿಸುತ್ತಿದೆ. ನಮ್ಮ ವಿಶಿಷ್ಟ ಹಬ್ಬಗಳನ್ನು ಇಡೀ ವಿಶ್ವಕ್ಕೆ ತಿಳಿಸುವುದು ಮತ್ತು ಆ ಮೂಲಕ ಇಡೀ ಪ್ರಪಂಚದ ಆತ್ಮಸಾಕ್ಷಿಯನ್ನು ಆಕರ್ಷಿಸುವುದು. ವಿಶ್ವ ರಾಷ್ಟç ಸಂಸ್ಥೆಯ ಘೋಷಣೆ ಮತ್ತು ನಮ್ಮ ಸಂವಿಧಾನದ ಆರ್ಟಿಕಲ್ 51 ಎ (ಎಫ್) ನ ಮಾರ್ಗದರ್ಶಿ ತತ್ವಗಳ ಅಡಿಯಲ್ಲಿ ಇದನ್ನು ಭಿತ್ತರಿಸಲಾಗುವುದು ಎಂದರು.
ಕಲಿಯಂಡ ಮೀನಾ ಪ್ರಕಾಶ್, ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ್, ಬೇಪಡಿಯಂಡ ದಿನು, ಅರೆಯಡ ಗಿರೀಶ್, ನಂದೆಟ್ಟಿರ ರವಿ ಸುಬ್ಬಯ್ಯ, ಚಂಬAಡ ಜನತ್, ಕಿರಿಯಮಾಡ ಶೆರಿನ್, ಕಿರಿಯಮಾಡ ಶಾನ್, ಬೊಟ್ಟಂಗಡ ಗಿರೀಶ್, ಅಪ್ಪೆಂಗಡ ಮಾಲೆ ಪೂಣಚ್ಚ, ಚೊಕ್ಕಂಡ ಕಟ್ಟಿ ಪಳಂಗಪ್ಪ, ಪಾರ್ವಂಗಡ ನವೀನ್, ಜಮ್ಮಡ ಮೋಹನ್, ಮದ್ರೀರ ಕರುಂಬಯ್ಯ, ಆದೇಂಗಡ ರಾಣ ಬೋಪಣ್ಣ, ಆದೇಂಗಡ ಸಾಬು ಕಾಳಪ್ಪ, ಕಾಂಡೇರ ಜಿಮ್ಮಿ ಉತ್ತಪ್ಪ ಮತ್ತಿತರರು ಇದ್ದರು.