ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಜನಸಂಪರ್ಕ ಅಭಿಯಾನವನ್ನು ಸೋಮವಾರ ಬಿರುನಾಣಿಯಲ್ಲಿ ನಡೆಸಿತು.  
ಕೊಡಗು

ಬಿರುನಾಣಿಯಲ್ಲಿ ಸಿಎನ್‌ಸಿ ಮಾನವ ಸರಪಳಿ

ಆದರ್ಶ್. ಎಂ.ಕೆ.

ಪ್ರಮುಖ ಮುಖ್ಯಾಂಶಗಳು

  • ಬಿರುನಾಣಿಯಲ್ಲಿ ಸಿಎನ್‌ಸಿ ಮಾನವ ಸರಪಳಿ

ಮಡಿಕೇರಿ: ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ನಮ್ಮ ಸಂವಿಧಾನದ ವಿಧಿ ೩೭೧, ೫ ಮತ್ತು ೬ರ ಅಡಿಯಲ್ಲಿ ಸ್ವಯಂ ಆಡಳಿತ, ವಿಶ್ವಸಂಸ್ಥೆಯ ಸನ್ನದು ಮತ್ತು ಸಂವಿಧಾನದ ಅಡಿಯಲ್ಲಿ ಆದಿಮಸಂಜಾತ ಸಮುದಾಯವಾಗಿ ಕೊಡವ ಜನಾಂಗೀಯತೆಗೆ ಸಾಂವಿಧಾನಿಕ ರಕ್ಷಣೆ ಹಾಗೂ ವಿಶೇಷ ಗುರುತಿಸುವಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಜನಸಂಪರ್ಕ ಅಭಿಯಾನವನ್ನು ಮರೆನಾಡಿನ ಬಿರುನಾಣಿಯಿಂದ ಆರಂಭಿಸಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕೊಡಗು ಜಿಲ್ಲೆಯಾದ್ಯಂತ ಆಯೋಜಿಸಿರುವ ಅಭಿಯಾನದ ಭಾಗವಾಗಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಬಿರುನಾಣಿಯಲ್ಲಿ ನಡೆಯಿತು.
ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿ ಮಾತನಾಡಿದ ಎನ್.ಯು.ನಾಚಪ್ಪ ಅವರು, ಆದಿಮಸಂಜಾತ ಕೊಡವರು ಪ್ರತ್ಯೇಕ ಅನಿಮಿಸ್ಟಿಕ್ ನಂಬುಗೆಯ ಜನರೆಂದು ಸಂವಿಧಾನದ ಅಡಿಯಲ್ಲಿ ಗುರುತಿಸಿವ ಮೂಲಕ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ, ಸ್ವಯಂ ಶಾಸನದ ಜನ್ಮ ಭೂಮಿಯಾಗಿ ಭದ್ರತೆ ದೊರೆತಲ್ಲಿ ಮಾತ್ರ ಕೊಡವ ನೆಲ, ಜಲ, ಸಂಸೃತಿ, ಪರಂಪರೆ, ಪರಿಸರ, ಜೀವವೈವಿಧ್ಯ ರಕ್ಷಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಮ್ಮ ಆಧ್ಯಾತ್ಮಿಕ ನೆಲೆಗಳಾದ ಮಂದ್, ಕೊಡವರ ವಿಶಿಷ್ಟ ವಂಶಾವಳಿ, ಸಾಂಪ್ರದಾಯಿಕ ನೆಲೆಯನ್ನು ಅನಾವರಣ ಮಾಡುವುದರೊಂದಿಗೆ ಮುಂಬರುವ ೨೦೨೭ರ ರಾಷ್ಟ್ರೀಯ ಜನಗಣತಿಯಲ್ಲಿ, ಕೊಡವರು ಪ್ರತ್ಯೇಕ ಅಪರೂಪದ ಜನಾಂಗವೆಂದು ದಾಖಲೀಕರಣ ಮಾಡಬೇಕು. ಕೊಡವರ ಧಾರ್ಮಿಕ ಸಂಸ್ಕಾರ ಗನ್-ತೋಕ್ (ಬಂದೂಕು) ಸಂಪ್ರದಾಯವನ್ನು ಸಂವಿಧಾನದ ವಿಧಿ ೨೫, ೨೬ ಮತ್ತು ೨೮ರ ಅಡಿಯಲ್ಲಿ ಮುಂದುವರಿಸುವುದನ್ನು ಕೇಂದ್ರೀಕರಿಸಿದೆ. ಜೀವಜಲವಾಹಿನಿ ತಲಕಾವೇರಿಯನ್ನು ಕೊಡವರ ಪವಿತ್ರ ತೀರ್ಥ ಕ್ಷೇತ್ರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಆದಿಮಸಂಜಾತ ಕೊಡವರು ಪ್ರತ್ಯೇಕ ಅನಿಮಿಸ್ಟಿಕ್ ನಂಬುಗೆಯ ಜನರೆಂದು ಸಂವಿಧಾನದ ಅಡಿಯಲ್ಲಿ ಗುರುತಿಸಿವ ಮೂಲಕ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ, ಸ್ವಯಂ ಶಾಸನದ ಜನ್ಮ ಭೂಮಿಯಾಗಿ ಭದ್ರತೆ ದೊರೆತಲ್ಲಿ ಮಾತ್ರ ಕೊಡವ ನೆಲ, ಜಲ, ಸಂಸೃತಿ, ಪರಂಪರೆ, ಪರಿಸರ, ಜೀವವೈವಿಧ್ಯ ರಕ್ಷಿಸಲು ಸಾಧ್ಯ ಎಂದು ಮಾನವ ಸರಪಳಿ ಸಂಧರ್ಭ ಪ್ರತಿಪಾದಿಸಲಾಯಿತು. ಈ ನಿಟ್ಟಿನಲ್ಲಿ, ಕೊಡವರ ಜನಾಂಗೀಯ ಜಗತ್ತು, ಕೊಡವಲ್ಯಾಂಡ್ ಮತ್ತು ಕೊಡವ ಅಸ್ಮಿತೆಯ ರಕ್ಷಕ ಮತ್ತು ಸಾಕ್ಷಿಪ್ರಜ್ಞೆಯಾಗಿರುವ ಸಿಎನ್‌ಸಿ, ಈ ಸಾರ್ವಜನಿಕ ಜಾಗೃತಿ ಜನಸಂಪರ್ಕ ಕಾರ್ಯಕ್ರಮವನ್ನು ರೂಪಿಸುತ್ತಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.
ಈ ಸಂದರ್ಭ ಕಾಳಿಮಾಡ ಸವಿತಾ, ಅಣ್ಣಿರ ಸರಸು, ಕಾಳಿಮಾಡ ಪವಿತಾ, ಕಾಳಿಮಾಡ ಪೊನ್ನಮ್ಮ, ಕಾಳಿಮಾಡ ಶೆರಿ, ಬಲ್ಯಮೀದೇರಿರ ಸರಸ್ವತಿ, ಬೊಟ್ಟಂಗಡ ಗಿರೀಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಅಣ್ಣಿರ ಧನು ಪೂಣಚ್ಚ, ಅಣ್ಣಳಮಾಡ ಲಾಲ ಅಪ್ಪಣ್ಣ, ಕುಪ್ಪಣಮಾಡ ಜೀವನ್, ಕೀಕಣಮಡ ಮನು ಕಾರ್ಯಪ್ಪ, ನೆಲ್ಲಿರ ರಘು ನಂದ, ಕಳಕಂಡ ಚೇತು, ನೆಲ್ಲಿರ ಸೋಮಣ್ಣ, ಅಣ್ಣಳಮಾಡ ರಂಜನ್, ಕೀಕಣಮಡ ಉದಯ, ಅಣ್ಣಳಮಾಡ ಬಿದ್ದಪ್ಪ, ಅಣ್ಣಳಮಾಡ ಜಿಮ್ಮಿ, ಕರ್ತಮಾಡ ರಸ್ಸು, ಚೊಟ್ಟಂಗಡ ವಿಜು, ಕಳಕಂಡ ವಾಸು, ಅಣ್ಣಳಮಾಡ ಅಶೋಕ್ ಪಾಲ್ಗೊಂಡಿದ್ದರು.