ಹರದೂರು ಗ್ರಾಮ ಪಂಚಾಯಿತಿ ಕಚೇರಿಗೆ ಗೋಡೆ ಗಡಿಯಾರವನ್ನು ಅಧ್ಯಕ್ಷೆ ಭೋಜಮ್ಮ ಪಂಚಾಯಿತಿ ಅಧಿಕಾರಿ ಪೂರ್ಣಿಮಾ ಅವರಿಗೆ ಹಸ್ತಾಂತರಿಸಲಾಯಿತು. ವಿ.ಸಂತೋಷ್, ಸುಧಾಕರ್, ಮುಸ್ತಫಾ ಇತರರು ಇದ್ದರು.
ಸುಂಟಿಕೊಪ್ಪ: ಹರದೂರು ಗ್ರಾಮ ಪಂಚಾಯಿತಿ ಕಚೇರಿಗೆ ಗರಗಂದೂರು ರಾಯಲ್ ಪಾರ್ಮೆರ್ಸ್ ಕ್ಲಬ್ ವತಿಯಿಂದ ಗಡಿಯಾರವನ್ನು ಕೊಡುಗೆಯಾಗಿ ನೀಡಲಾಯಿತು.
ರಾಯಲ್ ಪಾರ್ಮೆರ್ಸ್ ಕ್ಲಬ್ ಉದ್ಘಾಟನೆಯ ಅಂಗವಾಗಿ ಸಂಘದ ಅಧ್ಯಕ್ಷ ವಿ.ಸಂತೋಷ್ ಹಾಗೂ ಪದಾಧಿಕಾರಿಗಳು ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಗೋಡೆ ಗಡಿಯಾರವನ್ನು ಅಧ್ಯಕ್ಷೆ ಭೋಜಮ್ಮ, ಪಂಚಾಯಿತಿ ಅಧಿಕಾರಿ ಪೂರ್ಣಿಮಾ ಅವರಿಗೆ ಹಸ್ತಾಂತರಿಸಿದರು. ಪಂಚಾಯಿತಿ ಉಪಾಧ್ಯಕ್ಷ ಮುಸ್ತಫಾ, ಸದಸ್ಯರು, ರಾಯಲ್ ಪಾರ್ಮೆರ್ಸ್ ಕ್ಲಬ್ ಉಪಾಧ್ಯಕ್ಷ ಸುಧಾಕರ್, ಕಾರ್ಯದರ್ಶಿ ವಿ.ಎ.ಸಂತೋಷ್ ಹಾಗೂ ಪದಾಧಿಕಾರಿಗಳು ಇದ್ದರು.