ನಾಪೋಕ್ಲು ಕ್ಲೀನ್ ಅಪ್ ತಂಡದ ವತಿಯಿಂದ ಪಟ್ಟಣದಲ್ಲಿ ಭಾನುವಾರ 3ನೇ ಹಂತದ ಸ್ವಚ್ಛತಾ ಅಭಿಯಾನ ನಡೆಸಿ ಕಸ ಸಂಗ್ರಹಿಸಲಾಯಿತು. ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.  clean
ಕೊಡಗು

ನಾಪೋಕ್ಲುವಿನಲ್ಲಿ ಸ್ವಚ್ಛತಾ ಅಭಿಯಾನ

ಕ್ಲೀನ್ ಅಪ್ ನಾಪೋಕ್ಲು ತಂಡದ ನೇತೃತ್ವ

ನಾಪೋಕ್ಲು: ಸ್ಥಳೀಯ ‘ನಾಪೋಕ್ಲು ಕ್ಲೀನ್ ಅಪ್’ ತಂಡದ ವತಿಯಿಂದ ಪಟ್ಟಣದಲ್ಲಿ 3ನೇ ಹಂತದ ಸ್ವಚ್ಛತಾ ಅಭಿಯಾನವನ್ನು ಭಾನುವಾರ ಯಶಸ್ವಿಯಾಗಿ ನಡೆಸಲಾಯಿತು. ನಾಪೋಕ್ಲು ಪೊಲೀಸ್ ಠಾಣೆಯಿಂದ ಆರಂಭಗೊಂಡು ಗ್ರಾಮ ಪಂಚಾಯಿತಿಯವರೆಗಿನ ಮುಖ್ಯ ರಸ್ತೆಯ ಬದಿಗಳಲ್ಲಿ ಸ್ವಯಂಸೇವಕರು ಸ್ವಚ್ಛತಾ ಕಾರ್ಯಕ್ರಮ ನಡೆಸಿರು. ಸ್ಥಳೀಯ ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘವು ಪೂರ್ಣ ಬೆಂಬಲ ನೀಡಿತ್ತು. ಅಪಾರ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ, ಖಾಲಿ ಬಾಟಲಿಗಳು ಹಾಗೂ ಇತರ ತ್ಯಾಜ್ಯಗಳನ್ನು ಕಾರ್ಯಕರ್ತರು ಒಟ್ಟುಗೂಡಿಸಿ, ಸಮರ್ಪಕವಾಗಿ ವಿಲೇವಾರಿ ಮಾಡಿದ್ದು ಗಮನ ಸೆಳೆಯಿತು. ನಾಪೋಕ್ಲು ಪಟ್ಟಣದ ಪ್ರತಿ ಅಂಗಡಿ ಮಾಲೀಕರು ತಮ್ಮ ಮಳಿಗೆ ಮುಂಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಕ್ಲೀನ್ ಅಪ್ ತಂಡದ ಪ್ರತಿನಿಧಿಗಳು ಮನವಿ ಮಾಡಿದರು. ಪಟ್ಟಣದ ನೈರ್ಮಲ್ಯ ಪಾಲನೆಗೆ ಸಾರ್ವಜನಿಕರು ಸಹಕಾರ ನೀಡಿದರೆ ಸ್ವಚ್ಛತಾ ಅಭಿಯಾನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಪಂಗೆ ಬೆಂಬಲಿಸಬೇಕು ಎಂದು ಸ್ವಯಂಸೇವಕರು ವಿನಂತಿಸಿದರು.