ಪುತ್ಯ ಗ್ರಾಮದಲ್ಲಿ ಸೂರ್ಯ ಸ್ವಸಹಾಯ ಸಂಘ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ರಸ್ತೆ ಬದಿಯ ಗಿಡ ಗಂಟಿಗಳು, ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಿದರು. ಸಂಘದ ಅಧ್ಯಕ್ಷ ನಂದಕುಮಾರ್ ಅಡ್ಕ, ಕಾರ್ಯದರ್ಶಿ ಪವನ್ ಬಂಗಾರಕೋಡಿ ಇತರರು ಇದ್ದರು.  clean
ಕೊಡಗು

ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮ

ಪುತ್ಯ ಗ್ರಾಮದಲ್ಲಿ ಸೂರ್ಯ ಸ್ವಸಹಾಯ ಸಂಘದಿಂದ ಶ್ರಮದಾನ

ನಾಪೋಕ್ಲು: ಗ್ರಾಮಕ್ಕಾಗಿ ಒಂದು ದಿನ ವಿಶೇಷ ಅಭಿಯಾನದಡಿ ಸೂರ್ಯ ಸ್ವಸಹಾಯ ಸಂಘದ ನೇತೃತ್ವದಲ್ಲಿ ಪುತ್ಯ ಗ್ರಾಮದ ರಸ್ತೆ ಬದಿಗಳನ್ನು ಸೋಮವಾರ ಸ್ವಚ್ಛಗೊಳಿಸಲಾಯಿತು.

ಪೆರಾಜೆ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಸೇವಾ ಕಾರ್ಯವು ಪುತ್ಯದ ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದ ಬಳಿಯಿಂದ ಆರಂಭಗೊಂಡ ಪೆರಾಜೆಯ ಪಯಸ್ವಿನಿ ಸೇತುವೆಯ ತನಕ ನೆರವೇರಿತು. ಸಂಘದ ಸದಸ್ಯರು ರಸ್ತೆ ಬದಿಯ ಗಿಡ ಗಂಟಿಗಳು, ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಿದ್ದು ಗಮನ ಸೆಳೆಯಿತು. ಕೊಡಗು ಜಿಲ್ಲಾ ದಿಶಾ ಸಮಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ಸ್ಥಳಕ್ಕೆ ಭೇಟಿ ನೀಡಿ, ಸಂಘದ ಸಮಾಜಮುಖಿ ಕಾರ್ಯಕ್ಕೆ ಪ್ರಶಂಸೆ ಸೂಚಿಸಿದರು. ಸಂಘದ ಅಧ್ಯಕ್ಷ ನಂದಕುಮಾರ್ ಅಡ್ಕ, ಕಾರ್ಯದರ್ಶಿ ಪವನ್ ಬಂಗಾರಕೋಡಿ ಸದಸ್ಯರಾದ ಬಾಲಕೃಷ್ಣ ತೊಕ್ಕುಳಿ, ಲೋಕೇಶ್ ಹೊದ್ದೆಟ್ಟಿ, ಮಹಾಬಲ ನಿಡ್ಯಮಲೆ, ಸತೀಶ್ ಬಂಗಾರಕೋಡಿ, ಕಿಶೋರ್ ಪೀಚೆ, ಜತ್ತಪ್ಪ ಯಾಪಾರೆ, ಹರ್ಷ ಬಂಗಾರಕೋಡಿ ಇತರರು ಉಪಸ್ಥಿತರಿದ್ದರು.