ಇತ್ತೀಚೆಗೆ ಕನ್ನಡ ಖಾಸಗಿ ಚಾನೆಲ್‌ನ ಧಾರವಾಹಿಯೊಂದರಲ್ಲಿ ಕೊಡವ ಪರಂಪರೆಗೆ ಅವಮಾನ ಆಗುವ ರೀತಿಯಲ್ಲಿ ಪಾತ್ರದಾರಿಗಳಿಗೆ ಉಡುಪು ಧರಿಸಿದ್ದ ಘಟನೆಗೆ ವಾಹಿನಿ ಸ್ಪಷ್ಟನೆ ನೀಡಿದ್ದು, ಕೊಡವರ ಭಾವನೆಗೆ ನೋವಾದ ಸಂದರ್ಭವನ್ನು ವಾಹಿನಿ ಸೇರಿದಂತೆ ತನ್ನೆಲ್ಲ ಸಾಮಾಜಿಕ ಮತ್ತು ದೃಶ್ಯಮಾಧ್ಯಮಗಳಿಂದಲೂ ತೆಗೆದು ಹಾಕಲಾಗಿದೆ ಎಂದು ಈ ಬಗ್ಗೆ ದೂರುದಾರರಾದ ಕೊಡವಾಮೆರ ಕೊಂಡಾಟ ಸಂಘಟನೆಗೆ ಮಾಹಿತಿ ನೀಡಿದೆ.
ಸಂಘಟನೆಯ ಅಧ್ಯಕ್ಷ ಚಾಮೇರ ದಿನೇಶ್ ಬೆಳ್ಯಪ್ಪ ಅವರಿಗೆ ಇ ಮೇಲ್ ಮೂಲಕ ಸ್ಪಷ್ಟೀಕರಣ ನೀಡಿರುವ ಖಾಸಗಿ ವಾಹಿನಿಯ ಹಿರಿಯ ಅಧಿಕಾರಿಗಳು ಮಾ. 19ರಂದು ಪ್ರಸಾರವಾದ ಧಾರಾವಾಹಿಯೊಂದರ 906ನೇ ಸಂಚಿಕೆಯಲ್ಲಿನ ಕೆಲವು ಭಾಗಗಳ ಬಗ್ಗೆ ಸಂಘಟನೆ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ದೂರು ತಲುಪಿದ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು ಟಿವಿ ಮತ್ತು ಡಿಜಿಟಲ್ ಸೇರಿದಂತೆ ಎಲ್ಲಾ ಪ್ಲಾಟ್‌ಫಾರಂಗಳಿAದ ಆಕ್ಷೇಪಿತ ದೃಶ್ಯಗಳನ್ನು ತೆಗೆದುಹಾಲಾಗಿದೆ. ಯಾವುದೇ ಸಾಂಸ್ಕೃತಿಕ, ಭಾಷಾ ಮತ್ತು ಸಮುದಾಯಗಳ ಪ್ರಾತಿನಿಧ್ಯದ ವಿಷಯದಲ್ಲಿ ಅತ್ಯುನ್ನತ ಮಟ್ಟದ ಸಂವೇದನಾಶೀಲತೆಯನ್ನು ಕಾಪಾಡಿಕೊಳ್ಳಲು ಬದ್ಧರಾಗಿದ್ದು, ಯಾವುದೇ ನಿರ್ದಿಷ್ಟ ಧರ್ಮ ಅಥವಾ ಸಮುದಾಯವನ್ನು ತಪ್ಪಾಗಿ ಚಿತ್ರಿಸುವ ಅಥವಾ ಗುರಿ ಮಾಡುವ ಉದ್ದೇಶ ಇರಲಿಲ್ಲ. ಇನ್ನು ಮುಂದೆ, ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ವಿಷಯಗಳಿಗೆ ಸಂಬAಧಿಸಿದ ಯಾವುದೇ ದೃಶ್ಯಗಳನ್ನು ಮರುಪರಿಶೀಲಿಸುವಾಗ ನಾವು ಹೆಚ್ಚಿನ ಜಾಗರೂಕತೆ ವಹಿಸುತ್ತೇವೆ ಮತ್ತು ಅಂತಹ ಚಿತ್ರಣಗಳನ್ನು ಅತ್ಯಂತ ಗೌರವ ಹಾಗೂ ಸಂವೇದನಾಶೀಲತೆಯಿAದ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ. ಈ ಧಾರಾವಾಹಿಯಲ್ಲಿ ಕೊಡವ ಕುಪ್ಯಚಾಲೆ ಮತ್ತು ಮಂಡೆತುಣಿಯನ್ನು ಅಸಂವೇದನೆಯಿAದ ಬಳಸುವ ಮೂಲಕ ಅತ್ಯಂತ ಪುರಾತನ ಶ್ರೀಮಂತ ಕೊಡವ ಸಂಸ್ಕೃತಿಗೆ ಅವಮಾನ ಮಾಡಿದ್ದ ವಾಹಿನಿಯ ವಿರುದ್ದ, ಕೊಡವಾಮೆರ ಕೊಂಡಾಟ ಸಂಘಟನೆ ನವದೆಹಲಿಯ ಬಿಸಿಸಿಸಿಗೆ ದೂರು ದಾಖಲಿಸಿತ್ತು.