ಸುಂಟಿಕೊಪ್ಪದ ಮನೆಯೊಂದರಲ್ಲಿ ರೆವರೆಂಡ್ ಫಾದರ್ ವಿಜಯಕುಮಾರ್ ನೇತೃತ್ವದಲ್ಲಿ ಕನ್ಯಾಸ್ತ್ರೀಯರು, ಸ್ವಯಂ ಸೇವಕರು ಕ್ಯಾರೋಲ್ಸ್ ವೃಂದದೊಂದಿಗೆ ಪ್ರಾರ್ಥನಾ ಗೀತೆ ಹಾಡುತ್ತಿರುವುದು.  
ಕೊಡಗು

ಕ್ರಿಸ್‌ಮಸ್ ಆಚರಣೆಗೆ ಅಣಿಗೊಳ್ಳುತ್ತಿರುವ ಸುಂಟಿಕೊಪ್ಪ

ಸುಂಟಿಕೊಪ್ಪ: ಸುಂಟಿಕೊಪ್ಪದ ಚರ್ಚ್‌ಗಳು ಸಂಭ್ರಮದ ಕ್ರಿಸ್‌ಮಸ್ ಆಚರಣೆಗೆ ಅಣಿಗೊಳ್ಳುತ್ತಿದೆ. ಧರ್ಮಗುರುಗಳು, ಸಮುದಾಯದ ಬಾಂಧವರು ಹಬ್ಬವನ್ನು ಸ್ವಾಗತಿಸಲು ಸಡಗರದಿಂದ ಸಿದ್ಧತೆ ನಡೆಸುತ್ತಿದ್ದಾರೆ.
ಕ್ರೈಸ್ತ ಸಮುದಾಯದವರ ಮನೆಗಳಲ್ಲಿ ವಿವಿಧ ಬಣ್ಣ ಬಣ್ಣದ ನಕ್ಷತ್ರಗಳು ಮಿನುಗಲು ಆರಂಭಿಸಿವೆ. ಕ್ರಿಸ್ತರು ಜನಿಸಿದ ಸ್ಥಳ ದನದಕೊಟ್ಟಿಗೆ (ಗೋದಲಿ) ನಿರ್ಮಾಣದೊಂದಿಗೆ ಚರ್ಚಿನಲ್ಲಿ ವಿವಿಧ ರೀತಿಯ ಅಲಂಕಾರ ನಡೆಯುತ್ತಿದೆ.
ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು ರೆವರೆಂಡ್ ಫಾದರ್ ವಿಜಯಕುಮಾರ್ ಸಾಂತಕ್ಲಾಸ್ ವೇಷದೊಂದಿಗೆ ಸಮುದಾಯದವರ ಮನೆಗಳಿಗೆ ತೆರಳಿ ಪೂರ್ವಭಾವಿಯಾಗಿ ಕ್ಯಾರೋಲ್ಸ್ ಗಾಯನದ ಮೂಲಕ ವಿಶೇಷ ಪ್ರಾರ್ಥನೆಯನ್ನು ಸಮರ್ಪಣೆ ಮಾಡುತ್ತಿದ್ದಾರೆ. ಸಂತ ಕ್ಲಾರಾ ಕಾನ್ವೆಂಟಿನ ಕನ್ಯಾ ಸ್ತ್ರೀಯರು, ಚರ್ಚ್ ಪಾನಾ ಸಮಿತಿಯ ಪದಾಧಿಕಾರಿಗಳು ಮತ್ತು ಯುವಜನರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಏಸು ಸ್ವಾಮಿಯ ಸಂದೇಶ ವಾಚನವೂ ದರೊಂದಿಗೆ ನೆರವೇರುತ್ತಿದೆ.