ಕುಶಾಲನಗರ ಗೌಡ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಸಮುದಾಯದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಚಿಲ್ಲನ ಗಣಿಪ್ರಸಾದ್, ಆನಂದ್ ಕರಂದ್ಲಾಜೆ, ಪೇರಿಯನ ಉದಯ್ ಕುಮಾರ್ ಮತ್ತಿತರರು ಇದ್ದರು. 
ಕೊಡಗು

ಕುಶಾಲನಗರ ಗೌಡ ಸಮಾಜದ ಅಧ್ಯಕ್ಷರಾಗಿ ಚಿಲ್ಲನ ಗಣಿಪ್ರಸಾದ್ ಆಯ್ಕೆ

ಕುಶಾಲನಗರ:
ಕುಶಾಲನಗರದ ಪ್ರತಿಷ್ಠಿತ ಗೌಡ ಸಮಾಜದ ಅಧ್ಯಕ್ಷ ಹಾಲಿ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಪುನರಾಯ್ಕೆ ಆಗಿದ್ದಾರೆ. ಭಾನುವಾರ ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ.
ಅಡಳಿತ ಮಂಡಳಿಯ ಸದಸ್ಯರಾಗಿ ಕುಲಚಟ್ಟಿ ಕಾಶಿ ಪೂವಯ್ಯ, ಕೂರನ ಪ್ರಕಾಶ್, ಬಳ್ಳಡ್ಕ ವಿಜಯಕುಮಾರ್, ಗುಡ್ಡೆಮನೆ ವಿಶ್ವಕುಮಾರ್, ಕೊಡಗನ ಹರ್ಷ, ನಡುವಟ್ಟಿರ ಶಿವಪ್ರಕಾಶ್,
ಕುಲ್ಲಚನ ಹೇಮಂತ್, ಪಳಂಗೋಟು ವಿನಯ್, ಕೋಡಿ ರೋಹಿತ್, ಅತ್ತೇಡಿ ಕೃಷ್ಣಪ್ಪ, ನರೇಶ್ ಜೈನಿ ಮತ್ತು ಮಹಿಳಾ ಸಂಘಗಳ ಡಬ್ಬಡ್ಕ ಡಾಟಿ ಮುತ್ತಪ್ಪ, ಕುದುಪಜೆ ದೇವಕಿ ಚಂದ್ರೇಶ್, ಕುದುಪಜೆ ಜ್ಯೋತಿ ಲವಕುಮಾರ್ ಅವರನ್ನು ಆಯ್ಕೆ ಮಾಡಲಾಯಿತರು.
ಈ ಸಂದರ್ಭ ಮಾತನಾಡಿದ ಚಿಲ್ಲನ ಗಣಿಪ್ರಸಾದ್ ಸಮಾಜದ ಸದಸ್ಯರ ಬಯಕೆಯಂತೆ ಹಿರಿಯರು, ಯುವಕರು ಹಾಗೂ ಮಹಿಳೆಯರ ಸಂತುಲಿತ ತಂಡ ಆಯ್ಕೆಯಾಗಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ದೃಷ್ಟಿಯಿಂದ ಯುವಕ ಮತ್ತು ಯುವತಿಯರಿಗೆ ಮನ್ನಣೆ ನೀಡಿದರು. ನೂತನ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು. ಸಮುದಾಯದ ಸಾಧಕರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ಕಾರ್ಯದರ್ಶಿ ಪೇರಿಯನ ಉದಯ್ ಕುಮಾರ್ ಸೇರಿದಂತೆ ಸಮಾಜದ ಪ್ರಮುಖರು ಇದ್ದರು.