ಆಲೂರು ಸಿದ್ದಾಪುರದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಣಿ ಅಂತೋಣಿ ಡಿಸೋಜ ಉದ್ಘಾಟಿಸಿದರು. ರೀನಾ, ಜಯಕುಮಾರ್, ನಮಿತಾ ಇತರರು ಇದ್ದರು.
- ಕ್ವೀನ್ಸ್ ಅಕಾಡೆಮಿ ಮುಖ್ಯಸ್ಥರಾದ ರಾಣಿ ಅಂತೋಣಿ ಡಿಸೋಜ ಅಭಿಪ್ರಾಯ
ಶನಿವಾರಸಂತೆ: ಕಲಿಕೆಯ ಅಡಿಪಾಯ ಗಟ್ಟಿಯಾಗಿದ್ದರೆ ಮಕ್ಕಳು ಶಿಕ್ಷಣದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಾರೆ ಎಂದು ಮಡಿಕೇರಿ ಕ್ವೀನ್ಸ್ ಅಕಾಡೆಮಿ ಮುಖ್ಯಸ್ಥರಾದ ರಾಣಿ ಅಂತೋಣಿ ಡಿಸೋಜ ಅಭಿಪ್ರಾಯಪಟ್ಟರು.
ಆಲೂರು ಸಿದ್ದಾಪುರ ಅದಿತಿ ಲಿಟ್ಲ್ ಫೀಟ್ಸ್ ಕಿಂಡರ್ ಗಾರ್ಟನ್, ಶಾರದಾ ಅಕಾಡೆಮಿಯಿಂದ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಯುಕೆಜಿ ಮಕ್ಕಳ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಎಷ್ಟೇ ಕಲಿತರು ಅದು ಕಡಿಮೆ ಎನ್ನುವಷ್ಟು ಮಟ್ಟಿಗೆ ಬಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷೆ ಕೆ. ಪಿ ರೀನಾ, ಉದ್ಯಮಿ ಜಯಕುಮಾರ್, ಆರೋಗ್ಯ ಕೇಂದ್ರದ ನಮಿತಾ ಮಾತನಾಡಿದರು.
ಶಿಕ್ಷಕಿಯರಾದ ಅಂಕಿತಾ, ಜೆ.ಡಿ.ಲಲಿತಮ್ಮ, ಕೆ.ಜೆ.ಡಯಾನಾ ಇತರರು ಇದ್ದರು. ಶಾಲಾ ವತಿಯಿಂದ ಗಣ್ಯರನ್ನು ಸನ್ಮಾನ ಮಾಡಲಾಯಿತು. ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು.