ಬಲ್ಲಮಾವಟಿ ವೃತ್ತದ ಕೊಳಕೇರಿ ಪ್ರಥಮ ಮತ್ತು ಕುವಲೆಕಾಡು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಕೊಳಕೇರಿ ಚೆಪ್ಪಂಡಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಹೇಮಾವತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ವೇತಾ, ಸಫ್ರೀನಾ,ಇದ್ದರು. 
ಕೊಡಗು

ಕುವಲೆಕಾಡು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಪ್ರಮುಖ ಮುಖ್ಯಾಂಶಗಳು

  • ಮಕ್ಕಳಿಗೆ ಆಟೋಟ ಸ್ಪರ್ಧೆ
ನಾಪೋಕ್ಲು: ಬಲ್ಲಮಾವಟಿ ವೃತ್ತದ ಕೊಳಕೇರಿ ಪ್ರಥಮ ಮತ್ತು ಕುವಲೆಕಾಡು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಸಿ.ಆರ್.ರಮ್ಲ ಅವರು ವಹಿಸಿದ್ದರು. ಕೊಳಕೇರಿ ಚಪ್ಪೆಡಡಿ ಸಾ ಮ ಪ್ರಾರ್ಥಮಿಕ ಶಾಲಾಯ ಮುಖ್ಯೋಪಾಧ್ಯಾಯರಾದ ಎಚ್.ಎ.ಹೇಮಾವತಿ ಮಾತನಾಡಿ ನ. 14 ಜವಾಹರಲಾಲ್ ನೆಹರು ಅವರ ಜನ್ಮದಿನ ವಾಗಿದ್ದು ಈ ದಿನವನ್ನು ನಾವೆಲ್ಲರೂ ಮಕ್ಕಳದಿನಾಚಾರಣೆಯನ್ನಾಗಿ ಆಚರಿಸುತ್ತಿದ್ದೇವೆ ಎಂದು ದಿನದ ಮಹತ್ವದ ಬಗ್ಗೆ ಮಾತನಾಡಿದರು.
ಗ್ರಾಮ ಪಂಚಾಯತಿ ಸದಸ್ಯೆಯಾದ ಅಮೀನ ಅವರು ಮಾತನಾಡಿ ಮಕ್ಕಳನ್ನು ಪೋಷಕರು ಅಂಗನವಾಡಿಗೆ ಕಳುಹಿಸಿದ್ದರಿಂದ ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಸದೃಢರಾಗುತ್ತರೆ ಎಂದರು. ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಆರೋಗ್ಯಾಧಿಕಾರಿ ಛಾಯಾ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿವಿಧ ರೀತಿಯ ಮನೋರಂಜನಾ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಿ ಶುಭ ಹಾರೈಸಲಾಯಿತು.
ಇದೇ ಸಂದರ್ಭ ಚೆಪ್ಪಂಡಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಹೇಮಾವತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂಗನವಾಡಿ ಕಾರ್ಯ ಕರ್ತೆಯರಾದ ಶ್ವೇತಾ, ಸಫ್ರೀನಾ . ಸಹಾಯಕಿ ಗೀತಾ ಬಾಲವಿಕಾಸ ಸಮಿತಿ ಅಧ್ಯಕ್ಷರು,ಸದಸ್ಯರು, ಶಾಲಾ ಶಿಕ್ಷಕ ವೃಂದ, ಆಶಾ ಕಾರ್ಯಕರ್ತೆ , ಪೋಷಕರೂ ಮಕ್ಕಳು ಹಾಜರಿದ್ದರು.