ಮರಗೋಡು ಅಂಗನವಾಡಿ ಕೇಂದ್ರದಲ್ಲಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಮಕ್ಕಳ ವಿವಿಧ ವೇಷಗಳು ಗಮನ ಸೆಳೆದವು. ಮೇಪಾಡಂಡ ಸವಿತಾ ಕೀರ್ತನ್, ಭಾರ್ಗವ್, ರತ್ನಾಕರ್, ಕುಸುಮಾ ಮತ್ತಿತರರು ಇದ್ದರು. 
ಕೊಡಗು

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಮಡಿಕೇರಿ:
ಮಡಿಕೇರಿ ತಾಲೂಕು ಮರಗೋಡು ಅಂಗನವಾಡಿ ಕೇಂದ್ರದಲ್ಲಿ ಪೋಷಕರು ಮತ್ತು ದಾನಿಗಳ ಸಹಕಾರದಿಂದ ಮಕ್ಕಳಿಗಾಗಿ ಛದ್ಮವೇಷ, ಆಟೋಟ ಸ್ಪರ್ಧೆ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ ಸೋಮವಾರ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಈ ಸಂದರ್ಭ ಮಾತನಾಡಿ ತೂಕದ ಮಹತ್ವ, ಮಕ್ಕಳ ಹಕ್ಕುಗಳು, ಸುರಕ್ಷತೆ, ರಕ್ಷಣೆ, ಆರೋಗ್ಯದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಸಮಾಜ ಸೇವಕ ಭಾರ್ಗವ್, ರತ್ನಾಕರ್, ಕುಸುಮಾ, ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ದಾನಿ ರತ್ನಕುಮಾರ್ ಮಕ್ಕಳಿಗಾಗಿ ಚೇರ್, ಹಾಸಿಗೆ, ಜಮ್ಖಾನಗಳನ್ನು ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಛದ್ಮವೇಷ, ವಿವಿಧ ರೀತಿಯ ನೃತ್ಯಗಳು, ಆಟೋಟ ಸ್ಪರ್ಧೆಗಳು ಪೋಷಕರ ಮನ ಸೆಳೆಯಿತು.