ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಪಾಜೆ ಯುವಕನ ಸಾಯಿ ಸಂಕೇತ್ . ಅಮೆರಿಕದ ಯುವತಿ ಶಾನೋಲ್  
ಕೊಡಗು

ದಾಂಪತ್ಯಕ್ಕೆ ಕಾಲಿಟ್ಟ ಚಿಕಾಗೋ ವಧು, ಸಂಪಾಜೆ ವರ

ನಾಪೋಕ್ಲು: ಸಂಪಾಜೆ ದೇವಾಲಯದಲ್ಲಿ ಇತ್ತೀಚೆಗೆ ಅಮೆರಿಕದ ಯುವತಿ ಹಾಗೂ ಸಂಪಾಜೆ ಯುವಕನ ವಿವಾಹ ಹಿಂದೂ ಸಂಪ್ರದಾಯದಂತೆ ನಡೆದಿದೆ.
ಸಂಪಾಜೆ ಗ್ರಾಮದ ಗೂನಡ್ಕ ಬೀಜದ ಕಟ್ಟೆಯ ಬಿ.ಕೆ.ಕೇಶವ ಅವರ ಪುತ್ರ ಸಾಯಿ ಸಂಕೇತ್ ಅವರು ಅಮೆರಿಕದ ಚಿಕಾಗೋ ನಿವಾಸಿ ಡಾ.ಚಾರ್ಲ್ಸ್ ಅವರ ಪುತ್ರಿ ಶಾನೋಲ್ ಅವರನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ವಧು-ವರ ಇಬ್ಬರೂ ಇಸ್ಕಾನ್ ಪರಂಪರೆಯ ಕೃಷ್ಣ ಭಕ್ತರಾಗಿದ್ದು, ಪರಸ್ಪರ ಇಷ್ಟಪಟ್ಟು ವಿವಾಹವಾಗಿದ್ದಾರೆ. ವರ ಸಾಯಿ ಸಂಕೇತ್ ಪಶ್ಚಿಮ ಬಂಗಾಳದ ಮಾಯಾಪುರದಲ್ಲಿ ಅಗರಬತ್ತಿ ತಯಾರಿಕೆ ಮತ್ತು ರಫ್ತು ಉದ್ಯಮ ಆರಂಭಿಸಿದ್ದರು. ಅದೇ ಅವಧಿಯಲ್ಲಿ ಭಾರತೀಯ ಸಂಸ್ಕೃತಿ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅಮೆರಿಕದ ಶಾನೋಲ್ ಮಾಯಾಪುರದಲ್ಲಿ ನೆಲೆಸಿ ಆನ್‌ಲೈನ್ ವಹಿವಾಟು ನಡೆಸುತ್ತಿದ್ದರು. ಸಂಕೇತ್ ಅವರ ಉದ್ಯಮ ಮಳಿಗೆಗೆ ಭೇಟಿ ನೀಡುತ್ತಿದ್ದ ಶಾನೋಲ್ ಪ್ರೀತಿಸಿ ವಿವಾಹವಾಗಿದ್ದಾರೆ.