ಚೇರಂಬಾಣೆಯ ಕಾರುಗುಂದ ಗೌಡ ಸಮಾಜದಲ್ಲಿ ಆಯೋಜಿಸಿದ್ದ ಚೇರಂಬಾಣೆಯ ಗೌಡ ಮಹಿಳಾ ಒಕ್ಕೂಟದ ಮೊದಲ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಕಡ್ಲೆರ ತುಳಸಿ ಮೋಹನ್, ಸುಳ್ಯಕೋಡಿ ಶಿವದೇವಿ ಅವನಿಶ್ಚಂದ್ರ, ಮಿಲನಾ ಭರತ್ ಇತರರು ಇದ್ದರು.
ನಾಪೋಕ್ಲು: ಚೇರಂಬಾಣೆಯ ಕಾರುಗುಂದ ಗೌಡ ಸಮಾಜದಲ್ಲಿ ಮಹಿಳಾ ಒಕ್ಕೂಟದಿಂದ ಶುಕ್ರವಾರ ಆಯೋಜಿಸಿದ್ದ ಚೇರಂಬಾಣೆಯ ಗೌಡ ಮಹಿಳಾ ಒಕ್ಕೂಟದ ಮೊದಲ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಸಮಾರಂಭದಲ್ಲಿ ಗೌಡ ಜನಾಂಗದ ಸಾಧಕರನ್ನು ಸನ್ಮಾನಿಸಲಾಯಿತು.
ನಿವೃತ್ತ ಪ್ರಾಂಶುಪಾಲರಾದ ಆನೆರ ಜಾನಕಿ, ಪೊಡನೋಳನ ನಳಿನಿ, ಶಿವಾಜಿ, ಕಡ್ಲೇರ ಧನವತಿ, ಟಿ.ಎ.ಹೇಮಲತಾ, ಪ್ಯಾರೆಮಜಲು ಸೀತಮ್ಮ ತಿಮ್ಮಯ್ಯ ಅವರನ್ನು ಮಹಿಳಾ ದಿನಾಚರಣೆಯ ಅಂಗವಾಗಿ ಸನ್ಮಾನಿಸಲಾಯಿತು.
ಚೇರಂಬಾಣೆಯ ಕಾರುಗುಂದ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಚೆಟ್ಟಿಮಾನಿ ಗ್ರಾಮದ ನಿವೃತ್ತ ಪ್ರಾಧ್ಯಾಪಕಿ ಸುಳ್ಯಕೋಡಿ ಶಿವದೇವಿ ಅವನಿಶ್ಚಂದ್ರ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್, ಕೊಡಗು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಸ್ಥಾಪಕ ಅಧ್ಯಕ್ಷೆ ಪುದಿಯ ನೆರವನ ರೇವತಿ ರಮೇಶ್, ಇನ್ನಿತರ ಗಣ್ಯರು ಉಪಸ್ಥಿತರಿದ್ದರು,