ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದಲ್ಲಿ ಕುರಿಗಳ ಮೇಲೆ ಚಿರತೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಶಾಸಕ ಡಾ.ಮಂತರ್‌ಗೌಡ ಗ್ರಾಮಕ್ಕೆ ಭೇಟಿ ನೀಡಿ ಕೃಷಿಕರೊಂದಿಗೆ ಚರ್ಚಿಸಿದರು. ಕೆ.ಎಂ. ಲೋಕೇಶ್, ಬಿ.ಬಿ. ಸತೀಶ್, ಮಧು ಕುಮಾರ್ ಇದ್ದರು.  
ಕೊಡಗು

ಚಿರತೆ ಸೆರೆ ಹಿಡಿಯಲು ತುರ್ತು ಕ್ರಮ ವಹಿಸಿ

ಎ. ಆರ್. ರಘುರಾಮ
ಸೋಮವಾರಪೇಟೆ: ತಾಲೂಕಿನ ಕೂತಿ ಗ್ರಾಮದಲ್ಲಿ ಕೃಷಿಕರು ಸಾಕಿದ ಕುರಿಗಳ ಮೇಲೆ ಚಿರತೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಡಾ.ಮಂತರ್ ಗೌಡ ಸೋಮವಾರ ಭೇಟಿ ನೀಡಿ ನೊಂದವರಿಂದ ಖುದ್ದು
ಮಾಹಿತಿ ಪಡೆದರು.
ಸಾಕಿದ ಎರಡು ಕುರಿಗಳನ್ನು ಚಿರತೆ ಕೊಂದಿರುವ ಬಗ್ಗೆ ಗ್ರಾಮದ ಎಚ್.ಎ. ಬಸಪ್ಪ ಅಳಲು ತೋಡಿಕೊಂಡರು.
ಈ ಸಂದರ್ಭ ಮಾತನಾಡಿದ ಶಾಸಕರು, ಚಿರತೆ ದಾಳಿಯಿಂದ ಗ್ರಾಮೀಣ ಜನರು ಭಯಭೀತರಾಗಿದ್ದಾರೆ. ಕೃಷಿ ಭೂಮಿಯಲ್ಲಿ ಕೆಲಸ ಮಾಡಲು ಭಯ ಪಡುತ್ತಿದ್ದಾರೆ. ಕಾರೆಕೊಪ್ಪದಲ್ಲೂ ಕರು, ನಾಯಿಗಳ ಮೇಲೆ ದಾಳಿ ಮಾಡಿದೆ. ಗೆಜ್ಜೆ ಹಣಕೋಡು ಗ್ರಾಮದಲ್ಲಿ ಮನೆಯ ಅಂಗಳದಲ್ಲಿ ಕಾಣಿಸಿಕೊಂಡು ಭಯ ಹುಟ್ಟಿಸಿದೆ ಎಂದರು.
ಕೃಷಿಕರಿಗೆ ಕಾಟ ಕೊಡುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭ ಕೆ.ಎಂ. ಲೋಕೇಶ್, ಬಿ.ಬಿ. ಸತೀಶ್, ಮಧು ಕುಮಾರ್ ಇದ್ದರು.