ಸೌಂದರ್ಯ ವರ್ಧಕ ತಜ್ಞರ ಸಂಘದ ಪ್ರಮುಖರು ಮೈಸೂರಿನಲ್ಲಿ ಸೆಸ್ಕ್ ಕೊಡಗು ವೃತ್ತದ ಸೂಪರಿಂಟೆAಡೆAಟ್ ಇಂಜಿನಿಯರ್ ಎಂ.ಕೆ. ಸೋಮಶೇಖರ್ ಅವರನ್ನು ಭೇಟಿ ಮಾಡಿದ್ದರು. ವನಿತಾ ಚಂದ್ರಮೋಹನ್, ನಾಗಮಣಿ, ನವ್ಯ, ತಾಜ್ ಇಸ್ಮಾಯಿಲ್ ಮತ್ತಿತರರು ಇದ್ದರು.
ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಟ್ಟಡಗಳ ಸಮೀಪ ಹಾದು ಹೋಗಿರುವ ವಿದ್ಯುತ್ ತಂತಿಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕೂಡಲೇ ವರದಿ ನೀಡಿ ಅಗತ್ಯ ಇಲಾಖಾ ಕ್ರಮ ಕೈಗೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಸೆಸ್ಕ್ ಕೊಡಗು ವೃತ್ತದ ಸೂಪರಿಂಟೆAಡೆAಟ್ ಇಂಜಿನಿಯರ್ ಎಂ.ಕೆ. ಸೋಮಶೇಖರ್ ತಿಳಿಸಿದ್ದಾರೆ. ತಮ್ಮನ್ನು ಮೈಸೂರಿನ ಕಚೇರಿಯಲ್ಲಿ ಶುಕ್ರವಾರ ಭೇಟಿ ಮಾಡಿದ್ದ ಕುಶಾಲನಗರ ತಾಲೂಕು ಸೌಂದರ್ಯವರ್ಧಕ ತಜ್ಞರ ಅಸೋಸಿಯೇಷನ್ ಪದಾಧಿಕಾರಿಗಳ ನಿಯೋಗಕ್ಕೆ ಈ ಭರವಸೆ ನೀಡಿದ ಅವರು ಕುಶಾಲನಗರ ಗುಮ್ಮನಕೊಲ್ಲಿ ಬಳಿ ಮೇ 11 ರಂದು 11 ಕೆ ವಿ ವಿದ್ಯುತ್ ತಂತಿ ತಗುಲಿ ತೀವ್ರ ಸುಟ್ಟ ಗಾಯಗಳಿಗೆ ಒಳಗಾದ ವಿದ್ಯಾರ್ಥಿನಿ ಪ್ರಕರಣಕ್ಕೆ ಸಂಬAಧಿಸಿದAತೆ ಇಲಾಖೆ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಘಟನೆಯ ಸಮಗ್ರ ವರದಿಯನ್ನು ತಕ್ಷಣ ನೀಡುವಂತೆ ಸಂಬAಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಧ್ಯಾರ್ಥಿನಿಯ ಚಿಕಿತ್ಸೆ ವೆಚ್ಚವನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಭರಿಸಲು ಕ್ರಮ ಕೈಗೊಳ್ಳುವುದು. ಆಕಸ್ಮಿಕ ಘಟನೆ ನಡೆದಿದೆ. ಬಾಲಕಿಗೆ ಚಿಕಿತ್ಸೆ ನಡೆಯುತ್ತಿದ್ದು ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡುಬAದಿದೆ. ಘಟನೆಯ ಬಗ್ಗೆ ಈಗಾಗಲೇ ಸೆಸ್ಕ್ ಕೇಂದ್ರ ಕಚೇರಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಈ ಸಂಬAಧ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿ ಚಿಕಿತ್ಸೆಗೆ ತುರ್ತಾಗಿ 50 ಸಾವಿರ ರೂ. ನೀಡಿದ್ದಾರೆ. ಹೆಚ್ಚುವರಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿಗಮದ ಅಧಿಕಾರಿಗಳು ಈಗಾಗಲೇ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ಆರೋಗ್ಯದ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿದ್ದು ಉತ್ತಮ ಚಿಕಿತ್ಸೆ ನೀಡುವಂತೆ ಕೋರಲಾಗಿದೆ. ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಹೊಂದಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಸೌಂದರ್ಯವರ್ಧಕ ತಜ್ಞರ ಅಸೋಸಿಯೇಷನ್ ಜಿಲ್ಲಾ ಸ್ಥಾಪಕ ಅಧ್ಯಕ್ಷೆ ವನಿತಾ ಚಂದ್ರಮೋಹನ್, ತಾಲೂಕು ಅಧ್ಯಕ್ಷೆ ನಾಗಮಣಿ, ಪ್ರಧಾನ ಕಾರ್ಯದರ್ಶಿ ನವ್ಯ, ತಾಜ್ ಇಸ್ಮಾಯಿಲ್ ಮೈಸೂರಿನ ಆಸ್ಪತ್ರೆಗೆ ತೆರಳಿ ಮಗುವಿನ ಆರೋಗ್ಯ ವಿಚಾರಿಸಿ ತುರ್ತು ಚಿಕಿತ್ಸೆ ವೆಚ್ಚಕ್ಕೆ ಕುಶಾಲನಗರ ತಾಲೂಕು ಸಂಘದಿAದ 5 ಸಾವಿರ ರೂ. ಮತ್ತು ಸದಸ್ಯರ ಮೂಲಕ 30 ಸಾವಿರ ರೂ., ಜಿಲ್ಲಾ ಸೌಂದರ್ಯವರ್ಧಕ ಸಂಘದ ಮೂಲಕ 29 ಸಾವಿರ ರೂ. ಹಾಗೂ ಸಂಘದ ಕೋರಿಕೆ ಮೇರೆಗೆ ಬಿ.ಎಂ.ಐ. ಸಂಸ್ಥೆಯಿAದ 50 ಸಾವಿರ ರೂ. ಸೇರಿದಂತೆ 1.5 ಲಕ್ಷ ರೂ.ಗಳ ಧನಸಹಾಯ ನೀಡಲಾಗಿದೆ ಎಂದು ಅಸೋಸಿಯೇಷನ್ ಪ್ರಮುಖ ತಿಳಿಸಿದ್ದಾರೆ.