ಸೋಮವಾರಪೇಟೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಆಯೋಜಿಸಿದ್ದ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಪಡೆದ ಚಾಣುಕ್ಯ ತಂಡ. ಸಂಪತ್, ಮೋಹನ್, ಕವನ್ ಇದ್ದರು.  sports
ಕೊಡಗು

ಚಾಣುಕ್ಯ ತಂಡಕ್ಕೆ ಚಾಂಪಿಯನ್ ಪಟ್ಟ

ಆಟೋ ಚಾಲಕರು, ಮಾಲೀಕರ ಸಂಘದಿಂದ ಕ್ರೀಡಾಕೂಟ

ಸೋಮವಾರಪೇಟೆ : ಕನ್ನಡ ರಾಜ್ಯೋತ್ಸವ ಅಂಗವಾಗಿ ಅಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಚಾಣುಕ್ಯ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್, ಕಬಡ್ಡಿ, ಹಗ್ಗಜಗ್ಗಾಟ ಪಂದ್ಯಾವಳಿಗಳಲ್ಲಿ ಮೊದಲು ಬಹುಮಾನವನ್ನು ಚಾಣಕ್ಯ ತಂಡ ಮುಡಿಗೇರಿಸಿಕೊಂಡಿತು.

ಕ್ರಿಕೆಟ್ ದ್ವಿತೀಯ ಸ್ಥಾನವನ್ನು ಟೀಮ್ 18 ಬಜೆಗುಂಡಿ, ಕಬಡ್ಡಿಯಲ್ಲಿ 2ನೇ ಸ್ಥಾನವನ್ನು ಕರುನಾಡ ಕಿಂಗ್ಸ್ ತಂಡ, ಹಗ್ಗಜಗ್ಗಾಟದ ದ್ವಿತೀಯ ಸ್ಥಾನವನ್ನು ಜೇಸಿ ವೇದಿಕೆ ತಂಡ ಪಡೆಯಿತು. ಬಾಂಬ್ ಇನ್ ದಿ ಸಿಟಿ ಆಟದಲ್ಲಿ ದಿನೇಶ್ ಬಜೆಗುಂಡಿ ಹಾಗೂ ಸಿ.ಸಿ.ಪ್ರದೀಪ್ ಬಹುಮಾನ ಪಡೆದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರವೇ(ಪ್ರವೀಣ್‌ಶೆಟ್ಟಿ ಬಣ) ನಗರಾಧ್ಯಕ್ಷ ಬಿ.ಎಸ್.ಮಂಜುನಾಥ್ ಮಾತನಾಡಿದರು. ವೇದಿಕೆಯಲ್ಲಿ ಅಟೋ ಯೂನಿಯನ್ ಅಧ್ಯಕ್ಷ ಸಂಪತ್, ಮಾಜಿ ಅಧ್ಯಕ್ಷ ಆರ್.ಮೋಹನ್, ಕಾರ್ಯದರ್ಶಿ ಕವನ್, ಪದಾಧಿಕಾರಿಗಳಾದ ಯಡೂರು ಪ್ರಸನ್ನ, ಐಗೂರು ವಿಜಯ್, ಜಗದೀಶ್, ರವೀಶ್ ಕಲ್ಕಂದೂರು, ನಿಶಾನಿ ಮಂಜುನಾಥ್ ಇತರರು ಇದ್ದರು.

-------