ಕೆ.ಎಂ.ಎಸ್.ಎ. ವತಿಯಿಂದ ಕಂಡಂಗಾಲದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಕುರ್ಚಿಗಳನ್ನು ಕೊಡುಗೆ ನೀಡಲಾಯಿತು. ಆಲೀರ ರಶೀದ್, ಪವೀನ, ಲಕ್ಷ್ಮೀ, ಶರಣ್ಯ, ಪೂರ್ಣಿಮಾ ಇದ್ದರು. 
ಕೊಡಗು

ಕಂಡಂಗಾಲ ಸರ್ಕಾರಿ ಶಾಲೆಗೆ ಕುರ್ಚಿ ವಿತರಣೆ

ಪೊನ್ನಂಪೇಟೆ: ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ಶುಕ್ರವಾರ ವಿರಾಜಪೇಟೆ ಸಮೀಪದ ಕಂಡಂಗಾಲದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಕೆ.ಎಂ.ಎಸ್.ಎ. ಅಧ್ಯಕ್ಷ ಆಲೀರ ರಶೀದ್ ಅವರು ಕುರ್ಚಿಗಳನ್ನು ಶಾಲಾ ಮುಖ್ಯ ಶಿಕ್ಷಕ ಪವೀನ ಅವರಿಗೆ ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚು ಅನುಕೂಲಕರ ವಾತಾವರಣ ಸೃಷ್ಟಿಸಿರುವ ಸರ್ಕಾರಿ ಶಾಲೆಗಳು ಜಿಲ್ಲೆಯ ಪ್ರತಿ ಗ್ರಾಮಗಳ ಹೆಗ್ಗುರುತಾಗಿ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜವಾಬ್ದಾರಿ ಎಂದು ಪರಿಗಣಿಸಿ ಸರ್ಕಾರಿ ಶಾಲೆಗಳ ಅಸ್ತಿತ್ವವನ್ನು ಉಳಿಸಲು ಸರ್ಕಾರೇತರ ಸಂಘ ಸಂಸ್ಥೆಗಳು ಒತ್ತು ನೀಡುವಂತಾಗಬೇಕು. ಸರ್ಕಾರಿ ಶಾಲೆಗಳಿಗೆ ನೀಡುವ ಯಾವುದೇ ರೂಪದ ಕೊಡುಗೆ ಅಮೂಲ್ಯವಾದದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕಿಯರಾದ ಲಕ್ಷ್ಮೀ, ಶರಣ್ಯ, ಪೂರ್ಣಿಮಾ, ವಿದ್ಯಾರ್ಥಿಗಳು ಸೇರಿದಂತೆ ಕೆ.ಎಂ.ಎಸ್.ಎ. ಪದಾಧಿಕಾರಿಗಳು ಹಾಜರಿದ್ದರು.