ಸಿದ್ಧಪುರದ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಕೂರ್ಗ್ ಕ್ರಿಕೆಟ್ ಚಾಂಪಿಯನ್ಸ್ ಲೀಗ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎಡಿಕೇರಿ ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು.  
ಕೊಡಗು

ಸಿಸಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಪ್ರಮುಖ ಮುಖ್ಯಾಂಶಗಳು

  • 14 ತಂಡಗಳು ಭಾಗಿ
ಸಿದ್ದಾಪುರ: ಸ್ಥಳೀಯ ಫೈವ್ ಸ್ಟಾರ್ ಯುವಕ ಸಂಘದಿಂದ ಆಯೋಜಿಸಿರುವ ಕೂರ್ಗ್ ಕ್ರಿಕೆಟ್ ಚಾಂಪಿಯನ್ಸ್ ಲೀಗ್(ಸಿಸಿಎಲ್) ಪಂದ್ಯಾವಳಿಗೆ ಸಮಾಜ ಸೇವಕ ಎಡಿಕೇರಿ ಪ್ರಸನ್ನ ಬುಧವಾರ ಚಾಲನೆ ನೀಡಿದರು.
ಪಟ್ಟಣದ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಎಡಿಕೇರಿ ಪ್ರಸನ್ನ, ಕ್ರೀಡಾಕೂಟಗಳು ಯುವಕರಲ್ಲಿ ಶಿಸ್ತು, ಸಹಕಾರ ಮನೋಭಾವ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕ್ರೀಡೆಯ ಮೂಲಕ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುವುದರೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಮಾಜ ಸೇವಕ ಎಡಿಕೇರಿ ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು.
ಐದು ದಿನಗಳ ಕಾಲ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಿವೆ. ಫೈವ್ ಸ್ಟಾರ್ ಯುವಕ ಸಂಘದ ಅಧ್ಯಕ್ಷ ಎಸ್.ಬಿ.ರೆಹಮಾನ್, ಪ್ರಮುಖರಾದ ಮೋಹನ್, ಜಮಾಲ್, ಮುಸ್ತಫಾ, ಪ್ರವೀಣ್, ವಿಜಯಿ, ಹುಸೈನ್, ಮುದ್ದಸ್ಸಿರ್ ಇತರರು ಇದ್ದರು.