ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆ (ಹಳೇ ತಾಲೂಕು) ಹಳೇ ವಿದ್ಯಾರ್ಥಿಯಾದ ಅಪ್ಪನೆರವಂಡ ಮಾದಪ್ಪನವರು ತಮ್ಮ ತಾಯಿ ಹಾಗೂ ಶಾಲೆಯ ವಿಶ್ರಾಂತ ಶಿಕ್ಷಕಿ ದಿ. ಲಕ್ಷ್ಮೀ ಅವರ ಸವಿನೆನಪಿಗಾಗಿ ಶಾಲಾ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ವಿತರಿಸಿದರು. 
ಕೊಡಗು

ಶಾಲಾ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ

ಪ್ರಮುಖ ಮುಖ್ಯಾಂಶಗಳು

  • ಲಕ್ಷ್ಮೀ ಸ್ಮರಣಾರ್ಥ ನಗದು ಬಹುಮಾನ ವಿತರಣೆ
ನಾಪೋಕ್ಲು: ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆ (ಹಳೇ ತಾಲೂಕು) ಹಳೇ ವಿದ್ಯಾರ್ಥಿಯಾದ ಅಪ್ಪನೆರವಂಡ ಮಾದಪ್ಪನವರು ತಮ್ಮ ತಾಯಿ ಹಾಗೂ ಶಾಲೆಯ ನಿವೃತ್ತ ಶಿಕ್ಷಕಿ ದಿ.ಲಕ್ಷ್ಮೀ ಅವರ ಸವಿನೆನಪಿಗಾಗಿ ಶಾಲಾ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ವಿತರಿಸಿದರು.
ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರೇರಣಾದಾಯಿ ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹಕ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು. ಹಳೇ ವಿದ್ಯಾರ್ಥಿಯ ಈ ಸಮಾಜಮುಖಿ ಹಾಗೂ ಶಾಲಾ ಪ್ರೇಮದ ಕಾರ್ಯಕ್ಕೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಉಪಾಧ್ಯಕ್ಷ ಉದಯಶಂಕರ್, ಶಾಲೆಯ ಮುಖ್ಯಶಿಕ್ಷಕಿ ಚಂದ್ರಕಲಾ ಕೆ.ಜಿ. ಹಾಗೂ ಶಾಲೆಯ ಶಿಕ್ಷಕ ವೃಂದದವರು ಇದ್ದರು.