ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಜನಿಸಿದ ಶನಿವಾರಸಂತೆಯ ನಿವಾಸದಲ್ಲಿ ಕಾರ್ಯಪ್ಪ ಅಭಿಮಾನಿ ಬಳಗದ ವತಿಯಿಂದ ಕಾರ್ಯಪ್ಪ ಜನ್ಮ ದಿನ ಆಚರಿಸಲಾಯಿತು. ಶಿಕ್ಷಕ ಕೆ.ಪಿ.ಜಯಕುಮಾರ್, ಗೀತಾ ಹರೀಶ್ ಸೇರಿ ಇತರರು ಇದ್ದರು. 
ಕೊಡಗು

ಕಾರ್ಯಪ್ಪ ದೇಶಪ್ರೇಮ ಎಲ್ಲರಿಗೂ ಮಾದರಿ

ಪ್ರಮುಖ ಮುಖ್ಯಾಂಶಗಳು

  • Cariappa's
ಶನಿವಾರಸಂತೆ: ಫಿಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಅವರು ದೇಶ ಕಂಡ ವೀರ ಸೇನಾನಿ, ಸಮಯ ಪಾಲಕ, ಅತ್ಯುನ್ನತ್ತ ದೇಶಪ್ರೇಮಿಯಾಗಿದ್ದರು ಎಂದು ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ.ಜಯಕುಮಾರ್ ಶ್ಲಾಘಿಸಿದರು.
ಕಾರ್ಯಪ್ಪ ಅವರು ಜನಿಸಿದ ಮನೆಯಲ್ಲಿ ಬುಧವಾರ ಆಯೋಜಿಸಿದ್ದ 127ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಕಾರ್ಯಪ್ಪ ಅವರ ತಂದೆ ಕೋದಂಡೇರ ಮಾದಪ್ಪ ಶನಿವಾರಸಂತೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಯಾಗಿದ್ದರು. ಈ ವೇಳೆ ಜನಿಸಿದ ಕಾರ್ಯಪ್ಪ ತಮ್ಮ ಬಾಲ್ಯವನ್ನು ಇದೇ ಪರಿಸರದಲ್ಲಿ ಕಳೆದರು ಎಂದು ತಿಳಿಸಿದರು.
ಕಾರ್ಯಪ್ಪ ಅವರು 1947ರ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ನಮ್ಮ ಸೈನ್ಯವನ್ನು ಸಮರ್ಥವಾಗಿ ಮುನ್ನಡೆಸಿ ದೇಶಕ್ಕೆ ಜಯ ತಂದುಕೊಟ್ಟಿದ್ದರು. 1962ರಲ್ಲಿ ನಡೆದ ಚೀನಾದೊಂದಿಗಿನ ಯುದ್ಧದ ವೇಳೆಯಲ್ಲಿ ಅವರು ನಿವೃತ್ತರಾಗಿದ್ದರೂ ಸೇನೆಗೆ ಮಾರ್ಗದರ್ಶನ ನೀಡಿದ್ದರು. ಅವರ ಸೇವೆ, ದೇಶಪ್ರೇಮ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ಶನಿವಾರಸಂತೆ ಗ್ರಾಪಂ ಅಧ್ಯಕ್ಷೆ ಗೀತಾ ಹರೀಶ್ ಕಾರ್ಯಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು. ಸದಸ್ಯ ಎಸ್.ಸಿ.ಶರತ್ ಶೇಖರ್, ಉಪ ತಹಸೀಲ್ದಾರ್ ಮಧುಸೂದನ್, ಆರ್‌ಐ ಮಂಜುನಾಥ್, ಲೆಕ್ಕಾಧಿಕಾರಿ ಚಂದನ್, ಪ್ರಮುಖರಾದ ಮಹಮ್ಮದ್ ಖನ್ನ, ಕಾರ್ಯಪ್ಪ ಅಭಿಮಾನ ಬಳಗದ ಬಿಲಾಲ್, ರಕ್ಷಿತ್ ಮುಂತಾದವರು ಭಾಗವಹಿಸಿದ್ದರು.