ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಅಪಘಾತಕ್ಕೀಡಾದ ಬಸ್. 4: ಮುಖಾಮುಖಿಯಲ್ಲಿ ಜಖಂಗೊಂಡಿರುವ ವ್ಯಾಗನರ್ ಕಾರು.
ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ಶಾಂತಗೀರಿ ತಿರುವಿನಲ್ಲಿ ಮಡಿಕೇರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸೋಮವಾರ ಸಂಜೆ 5.30 ಘಟನೆ ನಡೆದಿದ್ದು, ಕಾರು ಚಾಲಕನ ಅಜಾಗರೂಕ ಚಾಲನೆಯೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಬಲಭಾಗದ ಟೈಯರ್ ರಸ್ತೆಯ ಬಲಭಾಗಕ್ಕೆ ಹಾರಿ ಬಿದ್ದಿದೆ. ಬಸ್ ಓವರ್‌ಟೇಕ್ ಮಾಡಲು ಹೋದ ಕಾರು ಚಾಲಕ ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಚಾಲಕನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದ ಹಿನ್ನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ವಾಹನ ದಟ್ಟಣೆ ಕಂಡು ಬಂತು.
ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣೆಯ ಎಎಸ್‌ಐ ಸೈಮನ್, ಹೆದ್ದಾರಿ ಗಸ್ತು ಪಡೆಯ ಎಎಸ್‌ಐ ಶೇಷಪ್ಪ ಆಗಮಿಸಿ ವಾಹನಗಳ ದಟ್ಟಣೆ ನಿಯಂತ್ರಿಸಿ ಮುಂದಿನ ಕ್ರಮ ಕೈಗೊಂಡರು.