ನಾಪೋಕ್ಲು ಸಮೀಪದ ಬೊಳಿಬಾಣೆ ಎಂಬಲ್ಲಿ ಶುಕ್ರವಾರ ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಒಂದು ರಸ್ತೆ ಬದಿಗೆ ಸರಿದಿರುವುದು. 
ಕೊಡಗು

ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಸ್ ಡಿಕ್ಕಿ

ಕಿರಣ್ ಗೌಡ.ಜಿ

ನಾಪೋಕ್ಲು: ಸಮೀಪದ ಬೊಳಿಬಾಣೆ ಬಳಿ ಶುಕ್ರವಾರ ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ರಸ್ತೆ ಬದಿಗೆ ಡಿಕ್ಕಿ ಹೊಡೆದಿದೆ.


ಕರಿಕೆಯಿಂದ ಭಾಗಮಂಡಲ- ನಾಪೋಕ್ಲು ಮೂರ್ನಾಡು ಮಾರ್ಗವಾಗಿ ಮಡಿಕೇರಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್, ನಾಪೋಕ್ಲು-ಮೂರ್ನಾಡು ಮುಖ್ಯ ರಸ್ತೆಯ ಬೊಲಿಬಾಣೆ ಬಳಿ ಹಿಂಬದಿ ವಾಹನಕ್ಕೆ ದಾರಿ ಮಾಡಿಕೊಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ತಪ್ಪಿ ರಸ್ತೆ ಬದಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬಸ್ ರಸ್ತೆ ಬದಿಗೆ ವಾಲಿದ್ದು, ಬಸ್ಸಿನ ತುರ್ತು ನಿರ್ಗಮನ ಬಾಗಿಲಿನ ಮೂಲಕ ಪ್ರಯಾಣಿಕರು ಹೊರಗೆ ಬಂದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ.