ಸಿದ್ದಾಪುರದ ಎಸ್‌ಎನ್‌ಡಿಪಿ ಸಭಾಂಗಣದಲ್ಲಿ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಪೂರ್ವಭಾವಿ ಸಭೆ ಕೊಡಗು ಎಸ್‌ಎನ್‌ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ ಲೋಕೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
- ಆ.28ರಂದು ಸಿದ್ದಾಪುರಲ್ಲಿ ಮೆರವಣಿಗೆ
ಸಿದ್ದಾಪುರ: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಪೂರ್ವಭಾವಿ ಸಭೆ ಕೊಡಗು ಎಸ್‌ಎನ್‌ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ ಲೋಕೇಶ್ ಅಧ್ಯಕ್ಷತೆಯಲ್ಲಿ ಸಿದ್ದಾಪುರದ ಎಸ್‌ಎನ್‌ಡಿಪಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿ.ಕೆ.ಲೋಕೇಶ್, ಆಧ್ಯಾತ್ಮಿಕ ಚಿಂತಕ, ಸಮಾಜ ಸುಧಾರಕ, ತತ್ವಜ್ಞಾನಿ ಬ್ರಹ್ಮಶ್ರೀ ನಾರಾಯಣ ಗುರುಗಳು ತುಳಿತಕ್ಕೊಳಗಾದ ಸಮಾಜದ ಏಳಿಗೆಗೆ ಶ್ರಮಿಸಿದ್ದರು. ಸಂಘಟನೆ, ವಿದ್ಯೆಗೆ ಆದ್ಯತೆ ನೀಡಿ, ಬಡವರ ಏಳಿಗೆಗೆ ಶ್ರಮಿಸಿದ್ದರು. ಪ್ರತಿ ವರ್ಷವೂ ಕೊಡಗು ಎಸ್.ಎನ್.ಡಿ.ಪಿ ಯೂನಿಯನ್ ವತಿಯಿಂದ ಅದ್ದೂರಿಯಿಂದ ಶ್ರೀನಾರಾಯಣ ಗುರುಗಳ ಜಯಂತಿಯನ್ನು ಆಚರಿಸುತ್ತಿದ್ದು, ಈ ವರ್ಷ ಮತ್ತಷ್ಟು ವಿಜೃಂಭಣೆಯಿಂದ ಜಯಂತಿ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ಹಿಂದೂ ಮಲಯಾಳಿ ಜನರಿದ್ದು, ಆ.28ರಂದು ಸಿದ್ದಾಪುರಲ್ಲಿ ಮೆರವಣಿಗೆಯೊಂದಿಗೆ ಗುರುಗಳ ಜಯಂತಿ ಆಚರಿಸಲಾಗುವುದು ಎಂದರು.
ಜಯಂತಿ ಆಚರಣಾ ಸಮಿತಿಗೆ ಅಧ್ಯಕ್ಷರಾಗಿ ಹರಿದಾಸ್, ಕಾರ್ಯದರ್ಶಿಯಾಗಿ ರೆಜಿತ್ ಕುಮಾರ್ ಆಯ್ಕೆ ಮಾಡಲಾಯಿತು. ಈ ವೇಳೆ ಉಪ ಸಮಿತಿಗಳಾದ ವೇದಿಕೆ ಸಮಿತಿ, ಮೆರವಣಿಗೆ ಸಮಿತಿ, ಆಹಾರ ಸಮಿತಿ ಸೇರಿದಂತೆ ವಿವಿಧ ಉಪ ಸಮಿತಿಗಳ ಸಂಚಾಲಕರು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಯೂನಿಯನ್ ಉಪಾಧ್ಯಕ್ಷ ಆರ್.ರಾಜನ್, ಪ್ರಮುಖರಾದ ಟಿ.ಆರ್.ಪಾಪಯ್ಯ, ಮೋಹನ್ ದಾಸ್, ರಾಜಶೇಖರ್, ಟಿ.ಸಿ. ನಾರಾಯಣ್, ವನಿತಾ ಘಟಕದ ಜಿಲ್ಲಾಧ್ಯಕ್ಷರಾದ ರೀಶಾ ಸುರೇಂದ್ರನ್ ಇತರರು ಇದ್ದರು.