ಪಲ್ಲಾಟ್ ಅಯ್ಯಪ್ಪ ದೇವರ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ.
ವಿರಾಜಪೇಟೆ: ನೆಹರು ನಗರ ವ್ಯಾಪ್ತಿಯ ಶ್ರೀ ಪಲ್ಲಾಟ್ ಅಯ್ಯಪ್ಪ ದೇವರ ಮರು ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ, ಶ್ರೀ ಪಲ್ಲಾಟ್ ಅಯ್ಯಪ್ಪ, (ವನ ಶಾಸ್ತವು) ವನದುರ್ಗಿ, ನಾಗದೇವತೆ ಮತ್ತು ಶ್ರೀ ಗಣಪತಿ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ಕಾರ್ಕಳದ ವೇ.ಮೂ. ಶ್ರೀಕಾಂತ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಏ.26ರಂದು ಆದ್ಯ ಗಣಪತಿ ಹೋಮ, ಅಂಕುರ ಪೂಜೆ, 27ರಂದು ಏಕಾದಶಿ ಮೂಲ ಮಂತ್ರ ಪಠಣ, ಕಲಶ ಮಂಟಪ ಸಂಸ್ಕಾರ, 28 ರಂದು ಬಿಂಬಶುದ್ಧಿ, ಆಯ್ಯಪ್ಪ ದೇವರ ಬಿಂಬಾಧಿವಸ ಆದಿವಾಸ ಹೋಮ ಮತ್ತು ಪೂಜೆ ನಡೆಯಿತು. 29ರಂದು ಅಯ್ಯಪ್ಪ ದೇವರ ಪತ್ರಿಷ್ಠೆ, ತತ್ವ ಹೋಮ, ಕಲಶಾಭಿಷೇಕ, ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ ನಡೆಯಿತು. 30 ರಂದು ಶ್ರೀ ಅಯ್ಯಪ್ಪ ದೇವರ ಬ್ರಹ್ಮ ಕಲಶಾಭಿಷೇಕ, ವ್ಯಾಸ ಪೂಜೆ, ಮಂತ್ರಾಕ್ಷತೆ ಪೂಜೆ ನಡೆಯಿತು. ಶ್ರೀ ಪಲ್ಲಾಟ್ ಅಯ್ಯಪ್ಪ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.