ಕುಶಾಲನಗರ-ಕೊಣನೂರು ರಸ್ತೆಯಲ್ಲಿ ಅಪಘಾತವಾಗಿರುವುದು. 
ಕೊಡಗು

ರಸ್ತೆ ಅಪಘಾತದಲ್ಲಿ ಬಾಲಕ ಮೃತ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಮತ್ತೊಬ್ಬನಿಗೆ ಗಾಯ
ಕುಶಾಲನಗರ: ಸಮೀಪದ ಕೂಡ್ಲೂರು ಕೆ.ನಿಂಗಪ್ಪ ಬಡಾವಣೆಯ ಜಂಕ್ಷನ್‌ನ ಕುಶಾಲನಗರ-ಕೊಣನೂರು ರಸ್ತೆಯಲ್ಲಿ ಬುಧವಾರ ಪಿಕಪ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬಾಲಕ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಟ್ಟಣದ ಗೋಪಾಲ್ ಸರ್ಕಲ್ ನಿವಾಸಿ ಸಿದ್ದರಾಜು ಅವರ ಪುತ್ರ ಶಾಯನ್(17) ಮೃತ ದುರ್ದೈವಿಯಾಗಿದ್ದು, ಇಂದಿರಾ ಬಡಾವಣೆಯ ಮಿಥುನ್ ಅವರ ಪುತ್ರ ಧನುಷ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಶಾಯನ್ ಬೈಕ್‌ನ ಹಿಂಭಾಗದಲ್ಲಿ ಧನುಷ್‌ನನ್ನು ಕೂರಿಸಿಕೊಂಡು ಕೂಡಿಗೆ ಕಡೆಯಿಂದ ಕುಶಾಲನಗರದ ಕಡೆಗೆ ಹೋಗುತ್ತಿದ್ದಾಗ ಕೊಣನೂರು ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದ್ದಾನೆ.
ಗೂಡ್ಸ್ ವಾಹನ ಡಿಕ್ಕಿಯ ರಭಸಕ್ಕೆ ಶಾಯನ್ ರಸ್ತೆ ಬಿದ್ದಿದ್ದು, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗದ ಮಧ್ಯೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣಾಧಿಕಾರಿ ಗಣೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತ ಮಾಡಿದ ಗೂಡ್ಸ್ ವಾಹನ, ಚಾಲಕ ದೀಕ್ಷಿತ್‌ನನ್ನು ವಶಕ್ಕೆ ಪಡೆದ ಪೊಲೀಸರು ಶಾಯಿನ್ ತಂದೆ ಸಿದ್ದರಾಜು ಅವರು ನೀಡಿದ ದೂರಿನ ಮೇರೆಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ.