ನೆಲ್ಯಹುದಿಕೇರಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಕೆಪಿ ಕನ್‌ಸ್ಟ್ರಕ್ಷನ್‌ನ ಮಾಲೀಕರೂ ಆದ ದಾನಿ ಸೆಬಾಸ್ಟಿನ್(ದೇವಸಿ) ಬಿಸಿನೀರಿನ ಬಾಯ್ಲರ್ ಕೊಡುಗೆಯಾಗಿ ನೀಡಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ಮುಸ್ತಫಾ, ಉಪಪ್ರಾಂಶುಪಾಲ ಅನಿಲ್ ಕುಮಾರ್ ಇದ್ದರು.  
ಕೊಡಗು

ನೆಲ್ಯಹುದಿಕೇರಿ ಕೆಪಿಎಸ್‌ಗೆ ಬಾಯ್ಲರ್ ಕೊಡುಗೆ

ಸಿದ್ದಾಪುರ: ನೆಲ್ಯಹುದಿಕೇರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಮಂಗಳವಾರ ಕೆಪಿ ಕನ್‌ಸ್ಟ್ರಕ್ಷನ್‌ನ ಮಾಲೀಕರೂ ಆದ ದಾನಿ ಸೆಬಾಸ್ಟಿನ್(ದೇವಸಿ) ಬಿಸಿನೀರಿನ ಬಾಯ್ಲರ್ ಕೊಡುಗೆಯಾಗಿ ನೀಡಿದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಮುಸ್ತಫಾ ಮಾತನಾಡಿ, ವಿದ್ಯಾರ್ಥಿಗಳ ಆರೋಗ್ಯ ಗಮನದಲ್ಲಿಟ್ಟುಕೊಂಡು ನೀಡಿರುವ ಕೊಡುಗೆ ಶ್ಲಾಘನೀಯವಾಗಿದೆ ಎಂದು ತಿಳಿಸಿದರು. ಕೆಪಿಎಸ್ ಉಪಪ್ರಾಂಶುಪಾಲ ಅನಿಲ್ ಕುಮಾರ್ ಇತರರು ಇದ್ದರು.