ಕುಶಾಲನಗರ ಲಯನ್ಸ್ ಕ್ಲಬ್ ಮತ್ತು ಗೌಡ ಸಮಾಜದ ಆಶ್ರಯದಲ್ಲಿ ಪುನಿತ್ ರಾಜ್ ಕುಮಾರ್ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು. ಡಾ.ಕರುಂಬಯ್ಯ, ಡಾ.ಪಂಚಮ್ ತಿಮ್ಮಯ್ಯ, ಚಿಲ್ಲನ ಗಣಿಪ್ರಸಾದ್, ಸುಮನ್ ಬಾಲಚಂದ್ರ ಮತ್ತಿತರರು ಇದ್ದರು.
ದಾನಗಳಲ್ಲಿ ಶ್ರೇಷ್ಠ ದಾನ ಎಂದರೆ ಅದು ರಕ್ತದಾನ. ರಕ್ತದಾನಕ್ಕೆ ಯಾರೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಮಡಿಕೇರಿ ಜಿಲ್ಲಾಸ್ಪತ್ರೆ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಹೇಳಿದರು. ಇಲ್ಲಿನ ಲಯನ್ಸ್ ಕ್ಲಬ್ ಮತ್ತು ಗೌಡ ಸಮಾಜದ ಆಶ್ರಯದಲ್ಲಿ ಪುನಿತ್ ರಾಜ್ ಕುಮಾರ್ ಹುಟ್ಟುಹಬ್ಬ ಅಂಗವಾಗಿ ಗೌಡ ಸಮಾಜ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಮಾಡುವ ಬಗ್ಗೆ ಜನರಲ್ಲಿ ಗೊಂದಲಗಳಿವೆ. ರಕ್ತಕ್ಕೆ ಪರ್ಯಾಯ ಯಾವುದೂ ಇಲ್ಲ. ರಕ್ತಕ್ಕಾಗಿ ಸಂಪೂರ್ಣವಾಗಿ ರಕ್ತದಾ£ವನ್ನೇ À ಅವಲಂಬಿಸಿದ್ದೇವೆ. ರಕ್ತದಾನ ಮಾಡುವ ಮೂಲಕ ರೋಗಿಗಳಿಗೆ ಜೀವದಾನ ಮಾಡಲು ಸಾಧ್ಯವಿದೆ. ರಕ್ತ ಸಂಬAಧಿ ಕಾಯಿಲೆಗಳಿಗೆ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ರಕ್ತದ ಅಗತ್ಯತೆ ತುಂಬಾ ಇದೆ. ಇತ್ತೀಚಿನ ದಿನಗಳಲ್ಲಿ ರೋಗಿಗಳು, ರೋಗಗಳು ಹೆಚ್ಚಾಗುತ್ತಿವೆ. ಅದೇ ರೀತಿ
ರಕ್ತಕ್ಕೆ ಕೂಡ ಬೇಡಿಕೆ ಹೆಚ್ಚುತ್ತಿದೆ. ಆದರೆ ರಕ್ತದಾನಿಗಳ ಸಂಖ್ಯೆ ಹೆಚ್ಚುತ್ತಿಲ್ಲ.
ರಕ್ತದಾನ ಮಾಡಿದರೆ ಆರೋಗ್ಯಕ್ಕೆ ಲಾಭಗಳಿವೆ. ಹಾಗಾಗಿ ಯುವಕರು ಹಾಗೂ ಆರೋಗ್ಯವಂತರು ಹೆಚ್ಚಾಗಿ ರಕ್ತದಾನ ಮಾಡುವ ಮೂಲಕ ಇತರರ ಪ್ರಾಣ ಕಾಪಾಡಬೇಕು ಎಂದರು.
ಲಯನ್ಸ್ ಕ್ಲಬ್ ರೀಜನಲ್ ಚೇರ್ ಪರ್ಸನ್ ಡಾ.ಪಂಚಮ್ ತಿಮ್ಮಯ್ಯ ಮಾತನಾಡಿ, ರಕ್ತದಾನಕ್ಕೆ ಸಹಕಾರ ನೀಡುವ ಚಿಂತನೆ ಎಲ್ಲರಲ್ಲೂ ಮೂಡಬೇಕಿದೆ. ಸ್ಥಿತಿವಂತರಾದರೂ ಕೊಡುಗೆ ನೀಡುವ ಮನಸ್ಥಿತಿ ಎಲ್ಲರಲ್ಲೂ ಇರುವುದಿಲ್ಲ. ಇದು ಬದಲಾಗಬೇಕಿದೆ. ಪುನಿತ್ ರಾಜ್ ಕುಮಾರ್ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಎಂದು ಹೇಳಿದರು.
ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಮಾತನಾಡಿ ರಕ್ತದಾನ ಮಾಡಲು ಅವಕಾಶವಿರುವವರು ಕಡ್ಡಾಯವಾಗಿ ರಕ್ತದಾನದಂತಹ ಸತ್ಕಾರ್ಯದಲ್ಲಿ ತೊಡಗಿಸಿಕೊಂಡು ಇತರರ ಜೀವಕ್ಕೆ ನೆರವಾಗಬೇಕಿದೆ ಎಂದರು.
ಲಯನ್ಸ್ ಕ್ಲಬ್ ಜಿಲ್ಲಾ ಕ್ಯಾಬಿನೆಟ್ ಉಪ ಕಾರ್ಯದರ್ಶಿ ಸುಮನ್ ಬಾಲಚಂದ್ರ, ಕುಶಾಲನಗರ ಅಧ್ಯಕ್ಷ ನಾರಾಯಣ, ಕಾರ್ಯದರ್ಶಿ ಕಿರಣ್, ಕುಶಾಲನಗರ ಗೌಡ ಸಮಾಜ ಉಪಾಧ್ಯಕ್ಷ ಕಾಶಿ ಪೂವಯ್ಯ, ಕಾರ್ಯದರ್ಶಿ ಹೇಮಂತ್, ಮೈಸೂರಿನ ಡಾ. ಇಬ್ರಾಹಿಂ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ.ಶಾಂತಿ, ಲಯನ್ಸ್ ಪ್ರಮುಖರಾದ ಚಿಣ್ಣಪ್ಪ, ಡಾ. ಪ್ರವೀಣ್, ರಾಜಶೇಖರ್, ಗೌಡ ಸಮಾಜದ ಪ್ರಮುಖರು, ರಕ್ತದಾನಿಗಳು ಪಾಲ್ಗೊಂಡಿದ್ದರು.