ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ರಾಮನಾಥನ್, ಎಂ.ಎA. ಚರಣ್, ಎಂ.ಡಿ. ಕೃಷ್ಣಪ್ಪ, ಚಂದ್ರಶೇಖರ್ ಹೇರೂರು, ಎಂ.ವಿ. ನಾರಾಯಣ ಮತ್ತಿತರರು ಇದ್ದರು. 
ಕೊಡಗು

ಕುಶಾಲನಗರದಲ್ಲಿ ಬಿಜೆಪಿ ವಿಜಯೋತ್ಸವ

ಕುಶಾಲನಗರ: 
 ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಕುಶಾಲನಗರದಲ್ಲಿ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಪಕ್ಷದ ಯುವ ಮೋರ್ಚಾ ಅಧ್ಯಕ್ಷ ರಾಮನಾಥನ್ ನೇತೃತ್ವದಲ್ಲಿ ಪಕ್ಷದ ಮುಖಂಡರು ಸೇರಿದಂತೆ ಕಾರ್ಯಕರ್ತರು ಸೇರಿಕೊಂಡು ನಗರದ ಗಣಪತಿ ದೇವಾಲಯದ ಮುಂಭಾಗದಲ್ಲಿ ಜಯ ಘೋಷ ಕೊಗುವ ಮೂಲಕ ಪಟಾಕಿ ಸಿಡಿಸಿ, ಸಿಹಿ ಹಂಚಿ ಗೆಲುವಿನ ಸಂಭ್ರಮವನ್ನು ವಿಜಯೋತ್ಸವದ ಮೂಲಕ ಆಚರಿಸಿದರು.
 ಈ ಸಂದರ್ಭ ಮಾತನಾಡಿದ ರಾಮನಾಥನ್ ನೈತಿಕವಾಗಿ, ರಾಜಕೀಯವಾಗಿ ಚುನಾವಣೆಯನ್ನು ಎದುರಿಸಲಾಗದೆ ಕಾಂಗ್ರೆಸ್ ಮತ್ತು ಎಂಜಿಬಿ ಮೋದಿ ವಿರೋಧಿಗಳ ತಂಡವನ್ನು ಕಟ್ಟಿಕೊಂಡು ಸುಳ್ಳು ಆರೋಪಗಳನ್ನು ಸೃಷ್ಟಿ ಮಾಡಿ ಮತ ಚೋರಿ ಎಂಬ ಹೊಸ ನಾಟಕ ಮಾಡಿದರು. ಅದರ ಜತೆಯಲ್ಲಿ ಧರ್ಮ ಧರ್ಮಗಳ ಮಧ್ಯೆ ವಿಷ ಬೀಜಗಳನ್ನು ಬಿತ್ತುವ ಮೂಲಕ ದ್ವೇಷ ಹರಡಿದರು. ಇದರ ಎಲ್ಲಾ ಪರಿಣಾಮ ಮತದಾರ ಸರಿಯಾದ ಉತ್ತರವನ್ನು ನೀಡಿದ್ದಾನೆ. ಮುಂದೆ ಕರ್ನಾಟಕ ವಿಧಾನಸಭಾ ಚುನಾವಣೆ ಕೂಡ ಇದೇ ಮಾದರಿಯಲ್ಲಿ ಗೆಲುವು ಕಾಣುವುದು ನಿಶ್ಚಿತ ಎಂದರು.
 ನಗರ ಬಿಜೆಪಿ ಅಧ್ಯಕ್ಷ ಎಂ.ಎA. ಚರಣ್ ಮಾತನಾಡಿ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ 202 ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಸಂತೋಷದ ವಿಷಯವಾಗಿದೆ. ಅವರಿಗೆ ಅಭಿನಂದನೆಗಳು. ಮುಂದೆ ಒಳ್ಳೆಯ ಆಡಳಿತ ನೀಡಲಿ ಎಂದು ಹಾರೈಸಿದರು. 
 ಪಕ್ಷದ ಪ್ರಮುಖರಾದ ಎಂ.ಡಿ. ಕೃಷ್ಣಪ್ಪ, ಚಂದ್ರಶೇಖರ್ ಹೇರೂರು, ಎಂ.ವಿ. ನಾರಾಯಣ, ಚಿಲ್ಲನ ಗಣಿಪ್ರಸಾದ್, ಕುಮಾರಪ್ಪ, ಜಿ.ಎಲ್. ನಾಗರಾಜ್. ಸಿ.ಎಂ. ಆಸಿಫ್, ಅಮೃತ್ ರಾಜ್, ಸುಮನ್, ಮಧು ಮತ್ತಿತರರು ಇದ್ದರು.