ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಸಮಾವೇಶ, ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ಧಿ ಹಾಗೂ ಆತ್ಮ ನಿರ್ಭರ್ ಭಾರತ್ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಬಿಜೆಪಿ ರಾಷ್ಟ್ರಿಯ ಕಾರ್ಯದರ್ಶಿ ಹಾಗೂ ಹರ್ಯಾಣದ ಮಾಜಿ ಕೃಷಿ ಸಚಿವ ಓಂ ಪ್ರಕಾಶ್ ಧನಕರ್ ಮತ್ತು ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೀತಕ ಎನ್. ರವಿ ಕುಮಾರ್ ಉದ್ಘಾಟಿಸಿದರು. ಕೆ.ಜಿ. ಬೋಪಯ್ಯ, ಮನು ಮುತ್ತಪ್ಪ, ರಾಬಿನ್ ದೇವಯ್ಯ, ಬಿ.ಬಿ. ಭಾರತೀಶ್, ಎಸ್.ಜಿ. ಮೇದಪ್ಪ ಮತ್ತಿತರರು ಇದ್ದರು. 
ಕೊಡಗು

ಬಿಜೆಪಿ ಜಿಲ್ಲಾ ಸಮಾವೇಶ

ಸುನಿಲ್ ಪೊನ್ನೇಟಿ
ಮಡಿಕೇರಿ:
ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಸಮಾವೇಶ, ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ಧಿ ಹಾಗೂ ಆತ್ಮ ನಿರ್ಭರ್ ಭಾರತ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಈಚೆಗೆ ಮಡಿಕೇರಿ ಗ್ರಾಮಾಂತರ ಮಂಡಲದ ಮಕ್ಕಂದೂರುವಿನ ಸಹಕಾರ ಭವನದಲ್ಲಿ ನಡೆಯಿತು. ಕೊಡಗು ಜಿಲ್ಲಾ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ರವಿ ಕಾಳಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಿಜೆಪಿ ರಾಷ್ಟ್ರಿಯ ಕಾರ್ಯದರ್ಶಿ ಹಾಗೂ ಹರ್ಯಾಣದ ಮಾಜಿ ಕೃಷಿ ಸಚಿವ ಓಂ ಪ್ರಕಾಶ್ ಧನಕರ್ ಮತ್ತು ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೀತಕ ಎನ್. ರವಿ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಓಂ ಪ್ರಕಾಶ್ ಧನಕರ್ ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ದಿನವನ್ನು ಸುಸಾಶನ್ ದಿನವನ್ನಾಗಿ ಆಚರಣೆ ಮಾಡುತಿದ್ದು ಅಟಲ್ ಜೀಯವರು ದೇಶದ ಅಭಿವೃದ್ಧಿ ಮತ್ತು ರಕ್ಷಣೆಯ ದೃಷ್ಟಿಯಲ್ಲಿ ಕೈಗೊಂಡ ಕೆಲ ದಿಟ್ಟ ನಿರ್ಧಾರವನ್ನು ಸ್ಮರಿಸಿ ಮಾತನಾಡಿದರು.
ಎನ್. ರವಿ ಕುಮಾರ್ ಆತ್ಮ ನಿರ್ಭರ್ ಭಾರತ ವಿಚಾರವಾಗಿ ಮಾತಾನಾಡಿ ಸ್ವದೇಶಿ ಉತ್ಪನಗಳ ಬಳಕೆಯಿಂದ ದೇಶದ ಪ್ರಗತಿ ಸಾಧ್ಯ. ಚುನಾವಣೆ ಆಯೋಗ ಎಸ್‌ಎಆರ್ ಮೂಲಕ ನೈಜ ಮತದಾರರಿಗೆ ಮತ ಚಲಾಯಿÀಲು ಅವಕಾಶ ಮಾಡಿ ಕೊಡುತಿದ್ದು ವೋಟ್ ಚೋರಿ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಧಾರ ರಹಿತ ಆರೋಪಕ್ಕೆ ಮುಂದೆ ತಕ್ಕ ಉತ್ತರ ದೊರೆಯಲಿದೆ. ಈಗಾಗಲೇ ಇದರ ಪರಿಣಾಮ ಬಿಹಾರ ಚುನಾವಣೆಯಲ್ಲಿ ಕಂಡುಬAದಿದ್ದು, ಮುಂದೆ ಪಶ್ಚಿಮ ಬಂಗಾಳದಲ್ಲಿ ಕೂಡ ಇದೇ ಫಲಿತಾಂಶ ಮರುಕಳಿಸಲಿದೆ. ಈ ದೇಶದ ಒಬ್ಬ ವ್ಯಕ್ತಿ ಒಂದೇ ಕಡೆ ಮತ ಚಲಾವಣೆ ಮಾಡು ವಂತಾಗುತ್ತದೆ ಎಂದು ಹೇಳಿದರು.
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ ಈ ಹಿಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆದರೂ ಕೊಡಗಿನಲ್ಲಿ ಪಕ್ಷದ ಸಂಘಟನೆ ಗಟ್ಟಿ ಯಾಗಿದ್ದು ಮುಂದೆ ಕಾರ್ಯಕರ್ತರ ಪರಿಶ್ರಮದಿಂದ ಪಕ್ಷ ಮುನ್ನಡೆ ಸಾಧಿಸಲಿದೆ ಎಂದರು. ಪ್ರಾಸ್ತಾವಿಕವಾಗಿ ಮಾತಾಡಿದ ರವಿ ಕಾಳಪ್ಪ ಕೊಡಗಿನಲ್ಲಿ ಪಕ್ಷದ ಸಂಘಟನೆ ಮತ್ತು ಮುಂದೆ ಬರುವ ಚುನಾವಣೆಗಳಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಪಡೆಯುವಲ್ಲಿ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕೆಂದು ಹೇಳಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ, ರಾಬಿನ್ ದೇವಯ್ಯ, ಬಿ.ಬಿ. ಭಾರತೀಶ್, ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ, ಪ್ರಮುಖರಾದ ರೀನಾ ಪ್ರಕಾಶ್, ಕೊಡಿ ಪೊನ್ನಪ್ಪ, ರವಿ ಕುಶಾಲಪ್ಪ, ಹರಪಳ್ಳಿ ರವೀಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಚಲನ್, ವಿ.ಕೆ. ಲೋಕೇಶ್ ನಾಲ್ಕು ಮಂಡಲದ ಅಧ್ಯಕ್ಷರು, ವಿವಿಧ ಮೋರ್ಚಾದ ಅಧ್ಯಕ್ಷರು ಮತ್ತು ಪಕ್ಷ ಪ್ರಮುಖರು ಇದ್ದರು.