ಕೂರ್ಗ್ ಬೈಕ್ ಝೋನ್ ಗೆಳೆಯರ ಬಳಗದಿಂದ ಕೊಡಗಿನಿಂದ ನೇಪಾಳದವರೆಗೆ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಬೈಕ್ ಪ್ರವಾಸಕ್ಕೆ ಕೊಡಗು ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿ ಗೌಡ ಚಾಲನೆ ನೀಡಿದರು. ಅನಂತ್ ಗೌಡ, ಪುನೀತ್, ಮಿಲನ್, ಪುವಿತ್, ಪ್ರಪುಲ್, ಮತ್ತಿತರರು ಇದ್ದರು.
ಉತ್ತಮ ಪ್ರಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಕೂರ್ಗ್ ಬೈಕ್ ಝೋನ್ ಗೆಳೆಯರ ಬಳಗದಿಂದ ಕೊಡಗಿನಿಂದ ನೇಪಾಳದವರೆಗೆ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಬೈಕ್ ಪ್ರವಾಸಕ್ಕೆ ಕೊಡಗು ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿ ಗೌಡ ಸೋಮವಾರ ಚಾಲನೆ ನೀಡಿದರು. 3 ಬೈಕ್‌ಗಳಲ್ಲಿ ವಿನಯ್ ದೇರಜೆ, ಅಭಿಷೇಕ್ ಹಾಗೂ ಗೌತಮ್ ಗೌಡ ನೇಪಾಳದ ಕಡೆ ಪ್ರಯಾಣ ಬೆಳೆಸಿದರು.
ಹೋಗುವ ದಾರಿಯಲ್ಲಿ ದಾರಿ ಉದ್ದಕ್ಕೂ 1 ಸಾವಿರ ವಿವಿಧ ಬೀಜಗಳನ್ನ ನೆಡುವುದರ ಮೂಲಕ ಪ್ರಕೃತಿಯನ್ನ ಸುಂದರಗೊಳಿಸುವ ಹಾಗೂ ಕಾಪಾಡುವ ಉದ್ದೇಶದಿಂದ ಕೊಡಗಿನಿಂದ ನೇಪಾಳದವರೆಗೆ ಅಂತರಾಷ್ಟ್ರೀಯ ಬೈಕ್ ಪ್ರವಾಸವನ್ನ ಕೈಕೊಂಡಿರುವುದಾಗಿ ಸವಾರರಲ್ಲಿ ಒಬ್ಬರಾದ ವಿನಯ್ ದೇರಜೆ ಈ ಸಂದರ್ಭ ಮಾಹಿತಿ ನೀಡಿದರು
ಅನಂತ್ ಗೌಡ, ಪುನೀತ್, ಮಿಲನ್, ಪುವಿತ್, ಪ್ರಪುಲ್, ಅಭಿಷೇಕ್, ತೇಜ, ಪವನ್, ದಿಲನ್ ಮತ್ತಿತರರು ಈ ವೇಳೆ ಇದ್ದರು.