ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮದ ಸಮುದಾಯ ಭವನಕ್ಕೆ ನಿರ್ಮಿಸಲು ಉದ್ದೇಶಿಸಲಾಗಿರುವ ಅಡುಗೆ ಕೋಣೆ ಕಾಮಗಾರಿಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಭೂಮಿ ಪೂಜೆ ನೆರವೇರಿಸಿದರು. ಈರಪ್ಪ, ಲೋಕೇಶ್, ಸಂಪತ್ ಇದ್ದರು. 
ಕೊಡಗು

ಅಡುಗೆ ಕೋಣೆ ನಿರ್ಮಾಣಕ್ಕೆ ಭೂಮಿ ಪೂಜೆ

ಬಾಲಮುರಳಿಕೃಷ್ಣ
ಸೋಮವಾರಪೇಟೆ: ಬೆಟ್ಟದಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಅಡುಗೆ ಕೋಣೆ ಕಾಮಗಾರಿಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಭೂಮಿ ಪೂಜೆ ನೆರವೇರಿಸಿದರು.
ಈ ಭಾಗದ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಬಳಕೆಯಾಗುತ್ತಿರುವ ಸಮುದಾಯ ಭವನಕ್ಕೆ ಅಡುಗೆ ಕೋಣೆ ಇಲ್ಲದೇ ಇರುವ ಬಗ್ಗೆ ಗ್ರಾಮಸ್ಥರು ಮನವಿ ಮಾಡಿಕೊಂಡ ಮೇರೆ ಸ್ಪಂದಿಸಿದ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಅವರು, ವೈಯಕ್ತಿಕವಾಗಿ ಕೋಣೆ ನಿರ್ಮಿಸಿಕೊಡುವ ಭರವಸೆ ನೀಡಿದ್ದು, ಅದರಂತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಕೆ. ಈರಪ್ಪ, ಕಾರ್ಯದರ್ಶಿ ಎಚ್.ಎಂ. ಲೋಕೇಶ್, ಬೆಟ್ಟದಕೊಪ್ಪ-ಬೆಟ್ಟದಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಆರ್. ಸಂಪತ್‌ಕುಮಾರ್, ಶಾಂತಳ್ಳಿ ವಿಎಸ್‌ಎಸ್‌ಎನ್ ನಿರ್ದೇಶಕ ಜಿ.ಎಚ್. ರಾಜೇಶ್, ಪ್ರಮುಖರಾದ ಬಿ.ಆರ್. ಶಿವಕುಮಾರ್, ಪ್ರವೀಣ್‌ಕುಮಾರ್, ಪರಮೇಶ್, ಬೆಟ್ಟದಳ್ಳಿ ಪೃಥ್ವಿ, ಸಂದೇಶ್ ಸೇರಿದಂತೆ ಇತರರಿದ್ದರು.