ಮೈಸೂರಿನ ಯುವರಾಜ ಸ್ಟೇಡಿಯಂನಲ್ಲಿ ನಡೆದ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿದ ಭಾಗಮಂಡಲದ ಚೈನೀಸ್ ಕೆನ್‌ಪೊ ಕರಾಟೆ ಶಾಖೆಯ ವಿದ್ಯಾರ್ಥಿಗಳು. ನಾಗರಾಜ್, ಇಮ್ಯಾನ್ವಲ್ ಕೆ.ಜೆ, ರಾಯ್ ಜೋಸೆಫ್, ರಾಜೇಶ್ ಇದ್ದರು. 
ಕೊಡಗು

ಕರಾಟೆಯಲ್ಲಿ ಭಾಗಮಂಡಲದ ವಿದ್ಯಾರ್ಥಿಗಳ ಸಾಧನೆ

ಮಡಿಕೇರಿ:
ಮೈಸೂರಿನ ಯುವರಾಜ ಸ್ಟೇಡಿಯಂನಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಭಾಗಮಂಡಲದ ಚೈನೀಸ್ ಕೆನ್‌ಪೊ ಕರಾಟೆ ಶಾಖೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ 7 ಚಿನ್ನ ಮತ್ತು 11 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಜಿತಿಕಾ, ಜಶ್ವಿನ್, ಪ್ರತಾಪ್, ಮನ್ವಿತ್, ಗುರುದೀಪ್, ಚೇತಕ್ ಹಾಗೂ ಶಿವಾನಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು.
ರತನ್, ಹಿಮಾನಿ, ಹರ್ಷಿಕಾ, ಪ್ರಿಯಾಂಕ, ಹಿರಾಲ್, ಅಕುಲ್, ಗಗನ್, ತಮನ್, ತ್ರೆöÊಸಿ, ಜಾನೇಶ್ ಹಾಗೂ ಪ್ರೀತಂ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು.
ತಂಡದ ಪರವಾಗಿ ಚೈನೀಸ್ ಕೆನ್‌ಪೊ ಕರಾಟೆ ಶಾಖೆಯ ನಿರ್ದೇಶಕÀ ನಾಗರಾಜ್, ಕರಾಟೆ ಶಿಕ್ಷಕÀರಾದ ಇಮ್ಯಾನ್ವಲ್ ಕೆ.ಜೆ, ರಾಯ್ ಜೋಸೆಫ್ ಹಾಗೂ ಗ್ರಾಂಡ್ ಮಾಸ್ಟರ್ ರಾಜೇಶ್ ಉಪಸ್ಥಿತರಿದ್ದರು.