ಮದೆನಾಡು ಗ್ರಾಮದಲ್ಲಿ ಇರುವ ಬಿಜಿಎಸ್ ಪಬ್ಲಿಕ್ ಶಾಲೆಯ 2025-26 ಸಾಲಿನ ಶಾಲಾ ವಾರ್ಷಿಕೋತ್ಸವವನ್ನು ಮಡಿಕೇರಿ ತಹಸೀಲ್ದಾರ್ ಆರ್. ಶ್ರೀಧರ್ ಉದ್ಘಾಟಿಸಿದರು. ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ನಿತಿನ್ ಚಕ್ಕಿ, ಬಿ.ವೈ. ರಾಜೇಶ್ ಯಲ್ಲಪ್ಪ, ಹುದೇರಿ ರಾಜೇಂದ್ರ ಮತ್ತಿತರರು ಇದ್ದರು. 
ಕೊಡಗು

ಬಿಜಿಎಸ್ ಪಬ್ಲಿಕ್ ಶಾಲೆ ವಾರ್ಷಿಕೋತ್ಸವ

ಸುನಿಲ್ ಪೊನ್ನೇಟಿ
ಮಡಿಕೇರಿ
ಮಡಿಕೇರಿ ಸಮೀಪದ ಮದೆನಾಡು ಗ್ರಾಮದಲ್ಲಿ ಇರುವ ಬಿಜಿಎಸ್ ಪಬ್ಲಿಕ್ ಶಾಲೆಯ 2025-26 ಸಾಲಿನ ಶಾಲಾ ವಾರ್ಷಿಕೋತ್ಸವ ಗುರುವಾರ ನಡೆಯಿತು. ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಮಡಿಕೇರಿ ತಹಸೀಲ್ದಾರ್ ಆರ್. ಶ್ರೀಧರ್ ಉದ್ಘಾಟನೆ ನೆರವೇರಿಸಿದರು. ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷÀ ಬಿ.ವೈ. ರಾಜೇಶ್ ಯಲ್ಲಪ್ಪ, ಮದೆ ಮಹದೇಶ್ವರ ಕಾಲೇಜು ಅಧ್ಯಕ್ಷ ಹುದೇರಿ ರಾಜೇಂದ್ರ, ಆಡಳಿತ ಅಧಿಕಾರಿ ಸುಧಾಕರ್, ಶಾಲೆಯ ಮೇಲ್ವಿಚಾರಕ ಸಚಿನ್ ಗೌಡ ಇದ್ದರು. ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದ್ದವರ ಗಮನ ಸೆಳೆದವು.