ಸೋಮವಾರಪೇಟೆ ಜೆಸಿಐ ಅಲುಮ್ನಿ ಕ್ಲಬ್ ತಂಡ ಮೈಸೂರಿನಲ್ಲಿ ನಡೆದ ವಲಯ 14 ರ ಸಮ್ಮೇಳನದಲ್ಲಿ ಅತ್ಯುತ್ತಮ ಜೆಸಿಐ ಅಲುಮ್ನಿ ತಂಡ ಪ್ರಶಸ್ತಿ ಪಡೆಯಿತು. ಆನಂದ್, ಮಮತಾ, ತೇಜಸ್ವಿ, ಅರುಣ್ ಇದ್ದರು. 
ಕೊಡಗು

ಜೇಸಿ ಸದಸ್ಯರಿಗೆ ಅತ್ಯುತ್ತಮ ತಂಡ ಪ್ರಶಸ್ತಿ

ಸೋಮವಾರಪೇಟೆ: ಜೆಸಿಐ ಅಲುಮ್ನಿ ಕ್ಲಬ್ ವತಿಯಿಂದ ವಲಯ 14ರ ವಲಯ ಸಮ್ಮೇಳನದಲ್ಲಿ ಸೋಮವಾರಪೇಟೆ ಹಿರಿಯ ಜೇಸಿ ಸದಸ್ಯರಿಗೆ ಅತ್ಯುತ್ತಮ ತಂಡ ಪ್ರಶಸ್ತಿ ದೊರೆತಿದೆ.
ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ವಲಯ 14ರ ಜೋನ್ ಅಧ್ಯಕ್ಷ ಅನಂದ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯನ್ನು ವಲಯ 14ರ ಉಪಾಧ್ಯಕ್ಷೆ ಸೋಮವಾರಪೇಟೆಯ ಎ.ಆರ್.ಮಮತಾ, ವಲಯ ನಿರ್ದೇಶಕ ಕೆ.ಎನ್. ತೇಜಸ್ವಿ, ಪೂರ್ವ ವಲಯ ಅಧಿಕಾರಿ ಬಿ.ಈ.ಅರುಣ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು.
ಸಂಸ್ಥೆಯ ರಮೇಶ್, ಪುರುಷೋತ್ತಮ್, ಮಹೇಶ್, ಕಾಂತರಾಜ್, ಪ್ರಕಾಶ್, ಗುರುಪ್ರಸಾದ್, ಗಿರೀಶ್, ಮಾಯಾ, ಉಷಾ, ರುಬೀನಾ, ವಸಂತ್ ಇದ್ದರು.