ಕೂಡಿಗೆಯ ಕೊಡಗು ಸೈನಿಕ ಶಾಲೆಯ ಎನ್‌ಸಿಸಿ ಸೀನಿಯರ್ ಡಿವಿಷನ್ ಘಟಕದ 23 ವಿದ್ಯಾರ್ಥಿಗಳ ದಳವು ಮಡಿಕೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರದರ್ಶಿಸಿದ ಅತ್ಯುತ್ತಮ ಪೆರೇಡ್ ಪ್ರದರ್ಶನಕ್ಕಾಗಿ ಉತ್ತಮ ದಳ ಟ್ರೋಫಿ ಪಡೆಯಿತು. ಸಚಿವ ಬೋಸರಾಜು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್, ಮೊಹಮ್ಮದ್ ಶಾಜಿ ಇತರರು ಇದ್ದರು. 
ಕೊಡಗು

ಕೊಡಗು ಸೈನಿಕ ಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ದಳ ಪ್ರಶಸ್ತಿ

ಪ್ರಮುಖ ಮುಖ್ಯಾಂಶಗಳು

  • best-corps-award
ಕುಶಾಲನಗರ: ಕೂಡಿಗೆಯ ಕೊಡಗು ಸೈನಿಕ ಶಾಲೆಯ ಎನ್‌ಸಿಸಿ ಸೀನಿಯರ್ ಡಿವಿಷನ್ ಘಟಕದ 23 ವಿದ್ಯಾರ್ಥಿಗಳ ದಳವು ಮಡಿಕೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರದರ್ಶಿಸಿದ ಪೆರೇಡ್ ಪ್ರದರ್ಶನಕ್ಕಾಗಿ ಉತ್ತಮ ದಳ ಟ್ರೋಫಿ ಪಡೆದುಕೊಂಡಿದೆ.
ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದ ಪೆರೇಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ತೋರಿದ ಉನ್ನತ ಶಿಸ್ತು, ಸಮನ್ವಯತೆ ಹಾಗೂ ನಿಖರತೆಯನ್ನು ಕಂಡು ಗಣ್ಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಟ್ರೋಫಿಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಪ್ರದಾನ ಮಾಡಿದರು. ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್, ಕಮಾಂಡಿಂಗ್ ಅಧಿಕಾರಿ ಹಾಗೂ ಉಪಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.