ನಿಟ್ಟೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮ ಮಟ್ಟದ ಕಾಫಿ ಬೆಳೆಗಾರರ ಸಭೆಯಲ್ಲಿ ಕಾಫಿ ಗಿಡಗಳ ಕಂಬ ಚಿಗುರಿನಿಂದ ಗಿಡ ಬೆಳೆಸುವ ವಿಧಾನದ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಪ್ರಫುಲ ಕುಮಾರಿ, ಮಹಿಜಾ, ಮಾಚಂಗಡ ಡಿಕ್ಕಿ ಅಯ್ಯಣ್ಣ ಮತ್ತಿತರರು ಇದ್ದರು. 
ಕೊಡಗು

ಸುಸ್ಥಿರ ಕಾಫಿ ಕೃಷಿಗೆ ಉತ್ತಮ ಕೃಷಿ ಪದ್ಧತಿಗಳು

ಗೋಣಿಕೊಪ್ಪಲು:
ಸುಸ್ಥಿರ ಕಾಫಿ ಕೃಷಿಗೆ ಅನುಸರಿಸಬೇಕಾದ ಉತ್ತಮ ಕೃಷಿ ಪದ್ಧತಿಗಳ ಕುರಿತು ಗೊಣಿಕೊಪ್ಪಲು ಕಾಫಿ ಮಂಡಳಿಯ ವತಿಯಿಂದ ನಿಟ್ಟೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಮಟ್ಟದ ಕಾಫಿ ಬೆಳೆಗಾರರ ಸಭೆ ಮಂಗಳವಾರ ನಡೆಯಿತು. ಹಿರಿಯ ಕಾಫಿ ಬೆಳೆಗಾರ ಮಾಚಂಗಡ ಡಿಕ್ಕಿ ಅಯ್ಯಣ್ಣ ಕಾರ್ಯಕ್ರಮ ಉದ್ಘಾಟಿಸಿದರು.
ಬಾಳೆಲೆ ವಲಯ ಕಾಫಿ ಮಂಡಳಿಯ ಸಹಾಯಕ ವಿಸ್ತರಣಾಧಿಕಾರಿ ಮಹಿಜಾ ಕಾಫಿ ಬೆಳೆಗಾರರಿಗೆ ಕಾಫಿ ಮಂಡಳಿಯ ವತಿಯಿಂದ ಪ್ರಸ್ತುತ ಲಭ್ಯವಿರುವ ವಿವಿಧ ಯೋಜನೆಗಳು, ಸೇವೆಗಳ ಬಗ್ಗೆ ಮಾಹಿತಿ ನೀಡುರುವುದರೊಂದಿಗೆ ಕೊಳೆ ರೋಗ, ಬೆರ್ರಿ ಬೋರ್, ಸಾರ್ಟ್ ಹೋಲ್ ಬೋರ್ ರೋಗಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಕೃಷಿ ಪದ್ಧತಿಗಳು, ಕಾಫಿ ಬೆಳೆ ಅಭಿವೃದ್ಧಿಗೆ ಪೂರಕವಾದ ತೋಟ ನಿರ್ವಹಣಾ ವಿಧಾನಗಳ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡಿ ವೈಜ್ಞಾನಿಕ ಕಾಫಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಕಾಫಿ ಕೃಷಿಯಲ್ಲಿ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬಹುದೆಂದರು.
ಕಾಫಿ ಮಂಡಳಿಯ ಮಣ್ಣು ವಿಜ್ಞಾನಿ ಪ್ರಫುಲ ಕುಮಾರಿ ಮಾತನಾಡಿ ಕಾಫಿ ಕೃಷಿಯಲ್ಲಿ ಪೌಷ್ಠಿಕಾಂಶಗಳ ನಿರ್ವಹಣೆ, ಕಾಫಿ ಗಿಡಗಳ ಕಂಬ ಚಿಗುರಿ ನಿಂದ ಗಿಡ ಬೆಳೆಸುವ ವಿಧಾನದ ಕುರಿತು ಪ್ರಾತ್ಯಕ್ಷಿಕೆ ನೀಡುತ್ತಾ ಕಾಫಿ ಬೆಳೆಗಾರರು ಎರಡು ವರ್ಷಗಳಿಗೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಅದಕ್ಕೆ ಅನುಗುಣವಾಗಿ ಗಿಡಗಳ ಆರೈಕೆಗೆ ಮಾರ್ಗ ಸೂಚಿ ಸಿದ್ಧಪಡಿಸಿಕೊಳ್ಳುವಂತೆ ತಿಳಿಸಿದರು. ಕಾಫಿ ಇಂಡಿಯಾ ಆಫ್ ಗೆ ನೋಂದಣಿ ಕಾರ್ಯವನ್ನು ಕಾಫಿ ಮಂಡಳಿಯ ಸಹಾಯಕ ಸಿಬ್ಬಂದಿ ಧಕ್ಷಿತಾ ನೆರವೇರಿಸಿದರು.
ನಿಟ್ಟೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಟಿಮಾಡ ಶರೀನ್ ಮತ್ತಣ್ಣ, ಶ್ರೀ ಕಾಲಭೈರವ ದೇವಸ್ಥಾನದ ಕಾರ್ಯದರ್ಶಿ ಕೊಟ್ಟಂಗಡ ಮಧು ಮಂಜುನಾಥ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಾಚಂಗಡ ಸುಜಾ ಪೂಣಚ್ಚ, ಗೊರುಗೋಡು ಅಯ್ಯಪ್ಪ ಸಂಘದ ಅಧ್ಯಕ್ಷ ಕಳ್ಳೇಂಗಡ ಶಾಂತ ಉತಯ್ಯ, ಇಗ್ಗುತ್ತಪ್ಪ ಸಂಘದ ಅಧ್ಯಕ್ಷ ಮುಕ್ಕಾಟಿರ ಚಿಮ್ಮು ಸೋಮಯ್ಯ, ಕಾರ್ಯದರ್ಶಿ ಫ್ರಿನ್ಸ್ ಪೊನ್ನಪ್ಪ, ವಿಜಯ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಮುಕ್ಕಾಟಿರ ವಿಕಾಸ್ ಉತ್ತಪ್ಪ ಪ್ರಮುಖರಾದ ಗಣಂಗಡ ಸುದೀಪ್, ಕೊಳುವಂಡ ಧನ್ಯ, ಪಡಿಞರಂಡ ಪ್ರಭು ಕುಮಾರ್ ಇದ್ದರು.